
ಬೆಳಗಾವಿಯ ಗೋಕಾಕ್ ಜಲಪಾತಕ್ಕೆ ಜೀವಕಳೆ
ಬೆಳಗಾವಿ,ಜು.30: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ವರುಣನ ಅಬ್ಬರ ಹೆಚ್ಚಾಗಿರುವುದರಿಂದ ಬೆಳಗಾವಿಯ ಘಟಪ್ರಭಾ ನದಿಗೆ ಜೀವಕಳೆ ಬಂದಿದ್ದು,ಗೋಕಾಕ್ ಫಾಲ್ಸ್, ಬಟವಾಡೆ ಜಲಪಾತದಲ್ಲಿ ನೀರು ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ.

ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಳಗಾವಿಯ ಗೋಕಾಕ್ ಜಲಪಾತವು ಮೈದುಂಬಿ ಹರಿಯುತ್ತಿದ್ದು, ಜಲಪಾತದಲ್ಲಿ ದೃಶ್ಯ ವೈಭವವೇ ಸೃಷ್ಟಿಯಾಗಿದ್ದು, 171 ಅಡಿ ಮೇಲಿನಿಂದ ನೀರು ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ.
