Crime NewsLatestTop Storiesಬೆಂಗಳೂರು-Bengaluru

ಯುವತಿಗೆ ಲೈಂಗಿಕ ನಿಂದನೆ : ಹಣ್ಣಿನ ವ್ಯಾಪಾರಿ ಅರೆಸ್ಟ್

ಬೆಂಗಳೂರು,ಜು.28 : ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕವಾಗಿ ನಿಂದಿಸಿ ಅಸಭ್ಯವಾಗಿ ಮಾತನಾಡಿದ್ದ ವ್ಯಕ್ತಿಯೊಬ್ಬನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ವಿಜಯ್ ರಾಘವ್(42)ಬಂಧಿತ ಆರೋಪಿ.ಈತ ಹಣ್ಣಿನ ವ್ಯಾಪಾರಿಯಾಗಿದ್ದು, ಎನ್ ಆರ್‌ಐ ಲೇಔಟ್ ನಿವಾಸಿ ಎಂದು ತಿಳಿದುಬಂದಿದೆ.
ರಸ್ತೆ ಬದಿಯಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿ ಬಳಿ ಬೈಕ್ ನಲ್ಲಿ ಬಂದ ವಿಜಯ್ ರಾಘವ್, ಲೈಂಗಿಕವಾಗಿ ನಿಂದಿಸಿ ನಿನ್ ರೇಟ್ ಎಷ್ಟು? ಎಂದು ಅಸಭ್ಯವಾಗಿ ವರ್ತಿಸಿದ್ದನು.ಆದರೆ ಘಟನೆಯಿಂದ ಧೃತಿಗೆಡದ ಧೈರ್ಯವಂತ ಯುವತಿ,ತಕ್ಷಣವೇ ತನ್ನ ಮೊಬೈಲ್‌ನಲ್ಲಿ ಕಾಮುಕನ ಕೃತ್ಯ ಸೆರೆಹಿಡಿದಿದ್ದಳು. ತನ್ನ ಮುಖ ಮತ್ತು ವಾಹನದ ಸಂಖ್ಯೆ ಮೊಬೈಲ್‌ನಲ್ಲಿ ಸಂಪೂರ್ಣವಾಗಿ ರೆಕಾರ್ಡ್ ಆಗುತ್ತಿರುವುದು ತಿಳಿಯುತ್ತಿದ್ದಂತೆ ವಿಜಯ್ ಅಲ್ಲಿಂದ ಕಾಲ್ಕಿತ್ತಿದ್ದ.
ಬಳಿಕ, ಯುವತಿ ಆ ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊAಡು, ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ನಗರದಲ್ಲಿ ಒಂಟಿಯಾಗಿ ನಿಲ್ಲಲು ಭಯವಾಗುವ ಪರಿಸ್ಥಿತಿ ಬಂದಿದೆಯೇ ಎಂದು ಕಳವಳ ವ್ಯಕ್ತಪಡಿಸಿದ್ದರು. ವೀಡಿಯೋ ಸಮೇತ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ, ಆರೋಪಿಯ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದ ರಾಮಮೂರ್ತಿನಗರ ಪೊಲೀಸರು ತನಿಖೆ ಕೈಗೊಂಡಿದ್ದರು.ಇದೀಗ ಆರೋಪಿಯನ್ನ ಬಂಧಿಸಿದ್ದು,ವಿಚಾರಣೆ ನಡೆಸುತ್ತಿದ್ದಾರೆ.

Share with Friends
author avatar
Digital Desk