Latestರಾಯಚೂರು

ಎನ್‌ಆರ್‌ಬಿಸಿ ಕಾಲುವೆ ನೀರು ಜಮೀನಿಗೆ ನುಗ್ಗಿ ಲಕ್ಷಾಂತರ ರೂ. ಬೆಳೆಹಾನಿ..!

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಇಂಗಳದಾಳ ಗ್ರಾಮದಲ್ಲಿ ಎನ್‌ಆರ್‌ಬಿಸಿ ನಾರಾಯಣಪುರ ಬಲದಂಡೆ ಕಾಲುವೆಯಿಂದ ನೀರು ಜಮೀನುಗಳಿಗೆ ನುಗ್ಗಿ ರೈತರ ಬೆಳೆಗಳು ಹಾನಿಗೊಳಗಾಗಿವೆ.

ಕಾಲುವೆಯಲ್ಲಿ ಹೂಳು ತುಂಬಿ, ಗಿಡಗಂಟೆಗಳು ಬೆಳೆದ ಹಿನ್ನೆಲೆಯಲ್ಲಿ ಕಾಲುವೆಯ 17ನೇ ಉಪಕಾಲುವೆಯಿಂದ ನೀರು ಹೊರಚೆಲ್ಲಿ ಇಂಗಳದಾಳ ಮತ್ತು ಬೂದಿನಾಳ ಸೀಮೆಯ ಜಮೀನುಗಳಿಗೆ ನುಗ್ಗಿದೆ. ಕಾಲುವೆಗೆ ನೀರು ಹರಿಸುವ ಮುನ್ನ ಕೆಬಿಜೆಎನ್‌ಎಲ್ ಅಧಿಕಾರಿಗಳು ಜಂಗಲ್ ಕಟ್ ಮಾಡದ ಕಾರಣ ಈ ಅನಾಹುತ ಸಂಭವಿಸಿದೆ ಎಂದು ರೈತರು ಆರೋಪಿಸಿದ್ದಾರೆ.

ಎನ್‌ಆರ್‌ಬಿಸಿ ಕಾಲುವೆ ನೀರು ಜಮೀನಿಗೆ ನುಗ್ಗಿ ಲಕ್ಷಾಂತರ ರೂ ಬೆಳೆಹಾನಿ

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಹತ್ತಿ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹಾನಿಯಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.ಸ್ಥಳಕ್ಕೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಬೇಸತ್ತ ರೈತರು ಸ್ವತಃ ಜೆಸಿಬಿ ತಂದು ಕಾಲುವೆಯ ಸ್ವಚ್ಛತೆ ಮಾಡಿಕೊಂಡರು. ಕೆಬಿಜೆಎನ್‌ಎಲ್ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Share with Friends
author avatar
Digital Desk