
ಆರ್ಟಿಒನಿಂದ ವಿಶೇಷ ಕಾರ್ಯಾಚರಣೆ : ವಾಹನಗಳ ವಶ
ವಿಜಯನಗರ,ಜು,27: ವಿಜಯನಗರ ಜಿಲ್ಲೆಯ ಆರ್ಟಿಒ ಅಧಿಕಾರಿಗಳ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಫಿಟ್ನೆಸ್, ಇನ್ಶುರೆನ್ಸ್ ಇಲ್ಲದೇ ಓಡಾಟ ನಡೆಸುತ್ತಿದ್ದ ನೂರಾರು ವಾಹನಗಳನ್ನ ವಶಪಡಿಸಿಕೊಂಡಿದೆ.
ವಶಪಡಿಸಿಕೊಂಡಿರುವ ವಾಹನಗಳ ಪೈಕಿ ಫಿಟ್ನೆಸ್, ಇನ್ಶುರೆನ್ಸ್ ಇಲ್ಲದೇ ಓಡಾಟ ನಡೆಸುತ್ತಿದ್ದ ಖಾಸಗಿ ಶಾಲೆಗಳ 390 ವಾಹನಗಳು ಸೇರಿವೆ.

ಕಳೆದ ಫೆಬ್ರವರಿಯಿಂದ ಈವರೆಗೆ 103 ಪ್ರಕರಣಗಳು ದಾಖಲಾಗಿದ್ದು, 11 ಲಕ್ಷ ರೂ.ಗಿಂತಲೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ದಂಡ ಪಾವತಿಸಿದ ಬಳಿಕ ವಾಹನಗಳನ್ನ ಬಿಟ್ಟು ಕಳಿಸಲಾಗಿದೆ.
ಜಪ್ತಿ ಮಾಡಿದ ಖಾಸಗಿ ಶಾಲಾ ವಾಹನ ಮಾಲೀಕರಿಂದ ದಂಡ ವಸೂಲಿ ಮಾಡಿರುವ ಅಧಿಕಾರಿಗಳು, ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ವಾಹನಗಳ ದಾಖಲಾತಿಗಳನ್ನ ಸರಿಪಡಿಸಿಕೊಂಡು ರಸ್ತೆಗೆ ವಾಹನ ಇಳಿಸಬೇಕು ಎಂದು ವಿಜಯನಗರ ಜಿಲ್ಲೆಯ ಆರ್ಟಿಒ ಅಧಿಕಾರಿ ಕೆ. ದಾಮೋದರ ಖಾಸಗಿ ಶಾಲಾ ಆಡಳಿತ ಮಂಡಳಿ ಮಾಲೀಕರು ಹಾಗೂ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.
