
ಅಮೆರಿಕ-ಇರಾನ್ ಯುದ್ಧದ ನಡುವೆ ಮಹತ್ವದ ಬೆಳವಣಿಗೆ..!
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ತೀವ್ರಗೊಂಡಿರುವ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೂಳೆಬ್ಬಿಸುವಂತಹ ಮಹತ್ವದ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ. ಅಮೆರಿಕ ಮತ್ತು ಸೌದಿ ಅರೇಬಿಯಾ ನಡುವೆ ಬೃಹತ್ ಶಾಂತಿಯುತ ಪರಮಾಣು ಸಹಕಾರ ಒಪ್ಪಂದಕ್ಕೆ ಅಂಕಿತ ಬಿದ್ದಿದೆ.
ಯುದ್ಧದ ಭೀತಿಯ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಪ್ರಮುಖ ಒಪ್ಪಂದಕ್ಕೆ ಅಂತಿಮ ಮೊಹರು ಒತ್ತಿದ್ದಾರೆ.ಈ ಒಪ್ಪಂದದ ಪ್ರಕಾರ, ಅಮೆರಿಕಗೆ ಸೌದಿ ಅರೇಬಿಯಾದಲ್ಲಿ ಬೃಹತ್ ಪರಮಾಣು ಸ್ಥಾವರಗಳನ್ನು ನಿರ್ಮಿಸುವ ಪೂರ್ಣ ಹಕ್ಕು ಲಭಿಸಲಿದೆ.

ಒಂದು ಕಡೆ ಇರಾನ್ ಜೊತೆಗಿನ ಸಂಘರ್ಷ ತೀವ್ರಗೊಳ್ಳುತ್ತಿರುವಾಗ, ಮತ್ತೊಂದೆಡೆ ಸೌದಿಗೆ ಪರಮಾಣು ತಂತ್ರಜ್ಞಾನದ ಬಲ ಸಿಗುತ್ತಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಈ ಒಪ್ಪಂದವು ಪ್ರಾದೇಶಿಕ ಭದ್ರತೆ ಮತ್ತು ಶಕ್ತಿ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.ಯುದ್ಧದ ಕಾವು ಹೆಚ್ಚುತ್ತಿರುವ ಸಮಯದಲ್ಲೇ ಟ್ರಂಪ್ ಕೈಗೊಂಡಿರುವ ಈ ನಡೆ, ಇಡೀ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದೆ!
