LatestTop Storiesರಾಷ್ಟ್ರೀಯ-National

ತಿರುಪತಿಯಲ್ಲಿ ಹರಿದುಬಂದ ಕಾಣಿಕೆ ಮಹಾಪೂರ..!

ಕಲಿಯುಗದ ದೈವ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಇತ್ತೀಚೆಗೆ ನಡೆದ ಹುಂಡಿ ಕಾಣಿಕೆ ಎಣಿಕೆಯಲ್ಲಿ ಮಂಗಳವಾರ ಒಂದೇ ದಿನ ಬರೋಬ್ಬರಿ ರೂ. 96.98 ಕೋಟಿ ಕಾಣಿಕೆ ಸಂಗ್ರಹವಾಗುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇಬ್ಬರು ಪ್ರಮುಖ ಭಕ್ತರು ಶ್ರೀವಾರಿ ದೇವಸ್ಥಾನಕ್ಕೆ ತಲಾ ರೂ. 1 ಕೋಟಿಯನ್ನು ದೇಣಿಗೆಯಾಗಿ ನೀಡಿದ್ದಾರೆ.ಒಟ್ಟು 2,354 ಭಕ್ತರು ಆಫ್‌ಲೈನ್ ವ್ಯವಸ್ಥೆಯ ಮೂಲಕ ನೇರವಾಗಿ ಸ್ವಾಮಿಗೆ ತಮ್ಮ ಕಾಣಿಕೆಯನ್ನು ಅರ್ಪಿಸಿದ್ದಾರೆ.

ತಿರುಪತಿಯಲ್ಲಿ ಹರಿದುಬಂದ ಕಾಣಿಕೆ ಮಹಾಪೂರ

1,246 ಭಕ್ತರು ಸರಾಸರಿ ರೂ. 10 ರಿಂದ 15 ಲಕ್ಷದವರೆಗೆ ಹಾಗೂ 1,212 ಭಕ್ತರು ರೂ. 1 ರಿಂದ 10 ಲಕ್ಷದವರೆಗೆ ವಿವಿಧ ಸೇವೆಗಳ ಮೂಲಕ ಕಾಣಿಕೆ ನೀಡಿದ್ದಾರೆ.
ದಿನದಿಂದ ದಿನಕ್ಕೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಕಾಣಿಕೆಯಲ್ಲೂ ಈ ಬಾರಿ ದಾಖಲೆ ಬರೆದಿರುವುದು ಭಕ್ತ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Share with Friends
author avatar
Digital Desk