
ರೈಲ್ವೆ ಹಳಿ ಬಳಿ ವಿದ್ಯಾರ್ಥಿನಿ ಶವ ಪತ್ತೆ
ದೇವನಹಳ್ಳಿ (ಬೆಂಗಳೂರು) ಜು.7: ದೇವನಹಳ್ಳಿ ಬಳಿಯ ರೈಲ್ವೆ ಹಳಿ ಪಕ್ಕದಲ್ಲೇ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ.
ದೇವನಹಳ್ಳಿ ತಾಲ್ಲೂಕಿನ ಉಗನವಾಡಿ ಗ್ರಾಮದ ದೀಪಿಕಾ ಮೃತ ವಿದ್ಯಾರ್ಥಿನಿಯಾಗಿದ್ದು,ಈಕೆ ಆಕಾಶ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಇನ್ನು ದೇವನಹಳ್ಳಿ ಹೊರವಲಯದ ಡಾಬಾ ಗೇಟ್ ಬಳಿ ಹಾದುಹೋಗಿವ ರೈಲೈ ಟ್ರ್ಯಾಕ್ ಬಳಿ ಈಕೆಯ ಶವ ಪತ್ತೆಯಾಗಿದೆ.
ಇದೇ ವೇಳೆ ಮಗಳ ಮೃತದೇಹ ನೋಡಿ ದೀಪಿಕಾ ತಾಯಿ ಮೂರ್ಚೆ ಹೋದ ಘಟನೆಯೂ ನಡೆಯಿತು.ಅಲ್ಲದೆ, ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ದೇವನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
