ವಿದೇಶ-International

ಮತ್ತೊಬ್ಬ ಭಾರತ ಮೂಲದ ವ್ಯಕ್ತಿಗೆ ಮಹತ್ವದ ಹುದ್ದೆ ನೀಡಿದ ಟ್ರಂಪ್, AI ಸಲಹೆಗಾರನಾಗಿ ಶ್ರೀರಾಮ್‌ ಕೃಷ್ಣನ್ ನೇಮಕ

ವಾಷಿಂಗ್ಟನ್‌ : ಮತ್ತೊಬ್ಬ ಭಾರತ ಮೂಲದ ವ್ಯಕ್ತಿಗೆ ಮಹತ್ವದ ಹುದ್ದೆ ನೀಡಿರುವ ಡೊನಾಲ್ಡ್ ಟ್ರಂಪ್ ಭಾರತ ಮೂಲದ ಉದ್ಯಮಿ ಹಾಗೂ ಲೇಖಕರೂ ಆಗಿರುವ ಶ್ರೀರಾಮ್‌ ಕೃಷ್ಣನ್ ಅವರನ್ನು ಶ್ವೇತಭವನದ ಕೃತಕ ಬುದ್ಧಿಮತ್ತೆ ವಿಭಾಗದ ನೀತಿ ಸಲಹೆಗಾರರನ್ನಾಗಿ ಅಮೆರಿಕದ ನಿಯೋಜಿಸಿದ್ದಾರೆ. ಈ ಮೂಲಕ ಶ್ರೀರಾಮ್‌ ಕೃಷ್ಣನ್ ಟ್ರಂಪ್‌ ಆಡಳಿತ ಸೇರಿದ 3ನೇ ಭಾರತೀಯರಾಗಿದ್ದಾರೆ.

ಶ್ರೀರಾಮ್‌ ಕೃಷ್ಣನ್ ಅವರು ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ (ವೈಟ್ ಹೌಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿ) ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಟ್ರಂಪ್‌ ಭಾನುವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ರೀರಾಮ್‌ ಕೃಷ್ಣನ್ ಈ ಹಿಂದೆ ಮೈಕ್ರೋಸಾಫ್ಟ್, ಟ್ವಿಟರ್, ಯಾಹೂ, ಫೇಸ್‌ಬುಕ್ ಮತ್ತು ಸ್ಕ್ಯಾಪ್‌ನಲ್ಲಿ ಉತ್ಪನ್ನ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇದೀಗ ವೈಟ್ ಹೌಸ್ AI ಮತ್ತು ಕ್ರಿಸ್ಟೋ ಮುಖ್ಯಸ್ಥರಾಗಿರುವ ಡೇವಿಡ್ ಒ. ಸ್ಯಾಕ್ಸ್ ಜೊತೆಗೆ ಕೆಲಸ ಮಾಡಲಿದ್ದಾರೆ.

Share with Friends
author avatar
News Desk