ವಿದೇಶ-International

ರಾಮಾಯಣ-ಮಹಾಭಾರತವನ್ನು ಅರೇಬಿಕ್ ಭಾಷೆಗೆ ಅನುವಾದಿಸಿದವರು ನ್ನು ಭೇಟಿಯಾದ ಪ್ರಧಾನಿ ಮೋದಿ

ಕುವೈತ್​​ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು 43 ವರ್ಷಗಳ ಭಾರತದ ಪ್ರಧಾನಿಯೊಬ್ಬರು ಮೊದಲು ಬಾರಿ ಕುವೈತ್‌ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಡಿಸೆಂಬರ್ 21 ಮತ್ತು 22 ರಂದು ಕುವೈತ್​​ಗೆ ಪ್ರವಾಸ ಕೈಗೊಂಡಿದ್ದಾರೆ.

ಕುವೈತ್‌ನ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಲ್ಲಿಗೆ ಹೋಗುತ್ತಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಅನಿವಾಸಿ ಭಾರತೀಯರು ಸ್ವಾಗತ ಕೋರಿದ್ದಾರೆ.

ಈ ವೇಳೆ ಬ್ದುಲ್ಲಾ ಅಲ್ ಬರೌನ್ ಮತ್ತು ಅಬ್ದುಲ್ ಲತೀಫ್ ಅಲ್ ನೆಸೆಫ್ ಎಂಬುವವರು ಮೋದಿಯನ್ನು ಭೇಟಿಯಾಗಿ ಪ್ರಧಾನಿ ಮೋದಿ ಅವರಿಗೆ ಅರೇಬಿಕ್ ಭಾಷೆಯಲ್ಲಿ ಅನುವಾದಿಸಿರುವ ರಾಮಾಯಣ ಮತ್ತು ಮಹಾಭಾರತವನ್ನು ನೀಡಿ ಅದಕ್ಕೆ ಅವರಿಂದ ಸಹಿ ಪಡೆದಿದ್ದಾರೆ.

43 ವರ್ಷಗಳ ನಂತರ ಭಾರತದ ಪ್ರಧಾನಿ ಕುವೈತ್ ಭೇಟಿ

ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಕುವೈತ್‌ಗೆ ಭೇಟಿ ನೀಡಿದ್ದು, ಕೆಲವೇ ಕ್ಷಣಗಳ ಮುನ್ನ ಕುವೈತ್ ನಲ್ಲಿ ಲ್ಯಾಂಡ್ ಆಗಿದ್ದಾರೆ. ಈ ವೇಳೆ ಹಲವು ಮಹತ್ವದ ವಿಚಾರಗಳ ಬಗ್ಗೆ ಉನ್ನತ ನಾಯಕರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ. 1981ರಲ್ಲಿ ಇಂದಿರಾ ಗಾಂಧಿಯವರು ಕುವೈತ್‌ಗೆ ಭೇಟಿ ನೀಡಿದ ಕೊನೆಯ ಭಾರತೀಯ ಪ್ರಧಾನಿಯಾಗಿದ್ದರು.ಆ ಮೂಲಕ ಪ್ರಧಾನಿ ಮೋದಿಯವರ ಈ ಪ್ರವಾಸ ಐತಿಹಾಸಿಕ ದಾಖಲೆಯಾಗಿದ್ದು, ಬರೋಬ್ಬರಿ 43 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಮತ್ತೆ ಕುವೈತ್ ಗೆ ಭೇಟಿ ನೀಡಿದಂತಾಗಿದೆ.

ಪ್ರಧಾನಿ ಮೋದಿಯವರ ಈ ಭೇಟಿಯಲ್ಲಿ ಭಾರತದ ರಕ್ಷಣೆ ಮತ್ತು ವ್ಯಾಪಾರ ಸೇರಿದಂತೆ ಪ್ರಮುಖ ಕ್ಷೇತ್ರಗಳ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಕುವೈತ್ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಕುವೈತ್‌ಗೆ ಭೇಟಿ ನೀದಿದ್ದಾರೆ. ಜೊತೆಗೆ ಕುವೈತ್ ನ ಭಾರತೀಯ ಸಮುದಾಯದೊಂದಿಗೆ ಕೂಡ ಸಂವಾದ ನಡೆಸಲಿದ್ದಾರೆ. ಹಾಗೆಯೇ ಅಲ್ಲಿನ ಭಾರತೀಯ ಕಾರ್ಮಿಕ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ.

Share with Friends
author avatar
News Desk