BlogLatestಬೆಂಗಳೂರು-Bengaluru

ಸಾಲದ ಸುಳಿಯಲ್ಲಿ ಸಿಲುಕಿತಾ ಬಿಬಿಎಂಪಿ..?

ಬೆಂಗಳೂರು : ಬಿಬಿಎಂಪಿ ಸಾಲದ ಸುಳಿಯಲ್ಲಿ ಸಿಲುಕಿದೆಯೇ ಎಮಬ ಅನುಮಾನ ಮೂಡುತ್ತಿದೆ. ಹೌದು ಅನ್ನಿಸುತ್ತೆ ಬಿಬಿಎಂಪಿ ಹೊರಡಿಸಿಸೋ ಸಾಲದ ಬೇಡಿಕೆ ಪತ್ರ.

ಹೆಬ್ಬಾಳ ದಿಂದ ಸಿಲ್ಕ್ ಬೋರ್ಡ್ ವರೆಗೆ ಟನಲ್ ರಸ್ತೆ ನಿರ್ಮಾಣದ ಡಿಪಿಆರ್ ಸಿದ್ದತೆ ಮಾಡಿಕೊಡಿರುವ ಬಿಬಿಎಂಪಿ ಹಣಕಾಸು ಕೊರತೆಯಿಂದ ಬ್ಯಾಂಕ್ ಅಥವಾ ಖಾಸಗಿ ಸಂಸ್ಥೆಯಿಂದ ಸಾಲಕ್ಕೆ ಬೇಡಿಕೆ ಇಟ್ಟಿದೆ. ಸುಮಾರು 19 ಸಾವಿರ ಕೋಟಿ ಸಾಲ ನೀಡುವ ಬಗ್ಗೆ ಪತ್ರಿಕೆ ಪ್ರಕಟಣೆ ನೀಡಿದೆ.

ಅಭಿವೃದ್ಧಿ ಹೆಸರಿನಲ್ಲಿ ಸಾಲದ ಮೊರೆ ಹೋಗಿರುವ ಪಾಲಿಕೆ ಖಜಾನೆಯಲ್ಲಿ ಹಣ ಇಲ್ಲದೆ ಹೊಸ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಜನರ ಸಿಂಪಥಿಗೆ ಹೊಸ..ಹೊಸ ಯೋಜನೆಯನ್ನು ಜಾರಿಗೆ‌ ತರಲು ಪ್ಲಾನ್ ಮಾಡಿರುವ ಬಿಬಿಎಂಪಿ ಗ್ಯಾರಂಟಿ ಯೋಜನೆಗೆ ಹಣ ಸರಿದೂಗಿಸಿ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಅನ್ನಿಸುತ್ತೆ.

ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ ರಾಜ್ಯ ಸರ್ಕಾರ.. ಆದ್ರೆ ಬಿಬಿಎಂಪಿ ಖಜಾನೆಯಲ್ಲಿ ಹಣವೇ ಇಲ್ಲ..! ಈ ಹಿನ್ನೆಲೆಯಲ್ಲಿ ಸಾಲದ ಮೊರೆ ಹೊದ ಬಿಬಿಎಂಪಿ.

ನಗರದ ಟ್ರಾಫಿಕ್ ದಟ್ಟಣೆ ತಪ್ಪಿಸಲು ಟನಲ್ ರಸ್ತೆ ನಿರ್ಮಾಣಕ್ಕೆ ಸಾವಿರಾರು ಕೋಟಿ ಸಾಲಕ್ಕೆ ಕೈ ಚಾಚ್ಚಿದ ಬಿಬಿಎಂಪಿ.. ಸಾಲ ನೀಡುವ ಬ್ಯಾಂಕ್ ಅಥವಾ ಖಾಸಗಿ ಸಂಸ್ಥೆಗಳು ಆರ್ ಬಿಐ ನೊಂದಣಿ ಆಗಿರಬೇಕು. ಸಾಲ ನೀಡುವ ಬ್ಯಾಂಕ್ ಅಥವಾ ಸಂಸ್ಥೆ ಗೆ ಸರ್ಕಾರ ಗ್ಯಾರಂಟಿ ನೀಡಲಿದೆ..

ಇನ್ನೂ ನೀವು ಕೊಡುವ ಸಾಲವನ್ನು 2025 ರ ಏಪ್ರಿಲ್ ನಲ್ಲಿ ಮೊದಲ ಕಂತನ್ನು ಡ್ರಾ ಮಾಡ್ತಿವಿ..ಉಳಿದ ಹಣವನ್ನು 2027 ರ ಡಿಸೆಂಬರ್ ನಲ್ಲಿ ಡ್ರಾ ಮಾಡ್ತಿವಿ ಅಂತ ಷರತ್ತು..ಇನ್ನೂ.. ಟನಲ್ ರಸ್ತೆಯಲ್ಲಿ ಟೋಲ್ ಸಂಗ್ರಹಿಸಲು ಉದ್ದೇಶಿಸಲಾಗಿದೆ..

ಹಾಗಾದ್ರೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯಿಂದ ಪಾಲಿಕೆ ಖಜಾನೆ ಖಾಲಿ ಆಯ್ತಾ…!
ಕಾಮಗಾರಿ ಗೆ ಚಾಲನೆ ನೀಡಿ ಹಣಕಾಸು ಸಂಕಷ್ಟ ಸಿಲುಕಿದ್ಯ ಎಂಬ ಪ್ರಶ್ನೆ‌ಗಳು ಎದುರಾಗಿವೆ.

Share with Friends
author avatar
News Desk