Blogತುಮಕೂರು-Tumakuru

ತುಮಕೂರಲ್ಲಿ ಹೊತ್ತಿ ಉರಿದ ಪಟಾಕಿ, ಪ್ಲಾಸ್ಟಿಕ್ ಅಂಗಡಿ ಗೋದಾಮು

ತುಮಕೂರು : ತುಮಕೂರು ನಗರದ ಹೃದಯ ಭಾಗ ಮಂಡಿ ಪೇಟೆಯಲ್ಲಿ ಪಟಾಕಿ, ಪ್ಲಾಸ್ಟಿಕ್ ಅಂಗಡಿ ಗೋದಾಮು ಹೊತ್ತಿ ಉರಿದ ಘಟನೆ ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೆಟ್ರೋ ಮುಂಭಾಗ ಇರುವ ರಾಮಕೃಷ್ಣ ಎಂಬುವರಿಗೆ ಸೇರಿದ ಮಂಡಿ ಪೇಟೆ ನೇತಾಜಿ ಟ್ರೇಡರ್ಸ್ ನಲ್ಲಿ ಘಟನೆ‌.ಅಕ್ರಮ ಪಟಾಕಿ ಶೇಖರಣೆಯಿಂದ ಭಾರಿ ಅನಾಹುತ ಸಂಭವಿಸಿದ್ದು ಬೆಳಗ್ಗೆ 6 ಗಂಟೆಯಿಂದ ಗೋದಾಮು ಹೊತ್ತಿ ಉರಿಯುತ್ತಿದೆ. ಪಟಾಕಿ, ಗ್ರಂಥಿಗೆ, ಸ್ಡೇಷನರಿ ಪ್ಲಾಸ್ಟಿಕ್ ವಸ್ತುಗಳ ಅಂಗಡಿ ಸುಟ್ಟು ಕಾರಕಳಾಗಿವೆ.

ಪಟಾಕಿಗಳು ನಿರಂತರವಾಗಿ ಸ್ಪೋಟಗೊಳ್ಳುತ್ತಿರುವುದರಿಂದ ಗೋದಾಮಿಗೆ ಹೊಂದಿಕೊಂಡಂತೆ ಇರುವ ಮನೆಗಳ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಸುತ್ತಮುತ್ತಲ ಪ್ರದೇಶದಲ್ಲಿ ಆವರಿಸಿದ ದಟ್ಟವಾದ ಹೊಗೆ ಆವರಿಸಿದ್ದು ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದ್ದು ಮಂಡಿಪೇಟೆ ರಸ್ತೆಯಲ್ಲಿ ಎರಡು ಕಡೆ ಬಂದ್ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Share with Friends
author avatar
News Desk