ಬಸ್ ದರ ಹೆಚ್ಚಳ ವಿಚಾರ : ಆರ್.ಅಶೋಕ್ಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು
ಬೆಂಗಳೂರು : ಬಸ್ ದರ ಹೆಚ್ಚಳದ ಸರ್ಕಾರದ ಚಿಂತನೆಯನ್ನ ಟೀಕಿಸಿ ಟ್ವೀಟ್ ಮಾಡಿದ್ದ ಆರ್.ಅಶೋಕ್ ಅವರಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿರುಗೇಟು ನೀಡಿದ್ದಾರೆ.
2013ರಲ್ಲಿ ತಾವು ಸಾರಿಗೆ ಸಚಿವರಾಗಿದ್ದಾಗ 10.5% ಬಸ್ ದರ್ ಹೆಚ್ಚಿಸಿದ್ದನ್ನ ಮರೆತರಾ..? 2020ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 12%ಹೆಚ್ಚಿಸಿದ್ದನ್ನ ಮರೆತರಾ? ಸಾರಿಗೆ ಸಂಸ್ಥೆಯನ್ನ 5900ಕೋಟಿ ನಷ್ಟದಲ್ಲಿ ಬಿಟ್ಟು ಹೋಗಿದ್ದೀರಿ, ಸಾರಿಗೆ ಸಂಸ್ಥೆ ಉಳಿದರೇನು ಮುಳಿಗಿದರೇನು ರಾಜಕೀಯವೇ ಮುಖ್ಯ ಎನ್ನುವ ಮನಸ್ಥಿತಿ ನಿಮ್ಮದು ಎಂದು ಅಶೋಕ್ ಗೆ ರಾಮಲಿಂಗ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ.
ನೀವು ಸಾರಿಗೆ ಸಚಿವರಾಗಿದ್ದವರು, ಸಾರಿಗೆ ಸಂಸ್ಥೆಗಳ ಬಗ್ಗೆ ತಿಳಿದೂ ಕೂಡ ಈ ರೀತಿ ಮಾತನಾಡುತ್ತಿದ್ದಾರಾ ಎಂದರೆ ಆಶ್ಚರ್ಯವಾಗುತ್ತಿದೆ ಎಂದು ರೆಡ್ಡಿ ಬೇಸರ ವ್ಯಕ್ತ ಪಡಿಸಿದ್ದಾರೆ.
” ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ @INCKarnataka ಸರ್ಕಾರ ಈಗ ಬಸ್ ದರ ಏರಿಕೆಗೆ ಪ್ರತ್ಯೇಕ ಆಯೋಗ ರಚಿಸಿ ಪಿಕ್ ಪಾಕೆಟ್ ಗಾಗಿ ಹೊಸ ಪ್ರಯೋಗ ಮಾಡಲು ಹೊರಟಿದೆ. ಆಡಳಿತ ಮಾಡುವಲ್ಲಿ ಮೂರು ಕಾಸು ಪ್ರಯೋಜನ ಇಲ್ಲದಿದ್ದರೂ ಜನರಿಗೆ ಮಂಕು ಬೂದು ಎರಚಿ ಹೊಸ ಪ್ರಯೋಗಗಳ ಮೂಲಕ ಜನರನ್ನ ಸುಲಿಗೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷದವರು ಬಹಳ ನಿಸ್ಸೀಮರು ” ಎಂದು ಆರ್.ಅಶೋಕ್ ಟೀಕಿಸಿದ್ದರು.
