ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ.. ಹವಮಾನ ಇಲಾಖೆಯಿಂದ ಆರೆಂಜ್ ಅಲರ್ಟ್!
ನವದೆಹಲಿ: ಮುಂದಿನ 5 ದಿನಗಳ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕ್ಕೆ ನೀಡಿದೆ. ಈ ಹಿನ್ನೆಲೆ ಭಾರತದ ಈಶಾನ್ಯ ರಾಜ್ಯಗಳಿಗೆ ಆರೆಂಜ್ ಅಲರ್ಟ್ ಅನ್ನು ಘೋಷಣೆ ಮಾಡಿದೆ.
ಯಾವ ಯಾವ ರಾಜ್ಯಕ್ಕೆ ಆರೆಂಜ್ ಅಲರ್ಟ್?
.ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ ರಾಜ್ಯಗಳಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಇನ್ನು ಮಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗಂಟೆಗೆ ಸುಮಾಋಊ 30-40 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಜೊತೆ ವರುಣ ಆರ್ಭಟ ಮಾಡುವ ಸಾಧ್ಯತೆ ಇದೆ. ಇದನ್ನು ಓದಿ: ಕೊನೆಗೂ ಕೇಂದ್ರದಿoದ ಕಾಂಗ್ರೆಸ್ಗೆ ಬಿಗ್ ರಿಲೀಫ್! ಚುನಾವಣೆ ಮುಗಿಯವರೆಗೂ ತೆರಿಗೆ ವಸೂಲಿ ಇಲ್ಲ
ನಾಗಲ್ಯಾಂಡ್, ಮಣಿಪುರ, ಮಿಜೋರಾಂ ಹಾಗೂ ತ್ರಿಪುರದಲ್ಲಿ ಭಾನುವಾರ, ಸೋಮವಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಅಸ್ಸಾಂನ ಏರ್ಪೋರ್ಟ್ನಲ್ಲಿ ಕಟ್ಟಡದ ಸೀಲಿಂಗ್ ಕುಸಿದು ಬಿದ್ದಿದೆ. ಅಲ್ಲದೇ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇದೆ ಎಂದು ಹೇಳಿದೆ. ಇದನ್ನು ಓದಿ: ಸಂಸದೆ ಸುಮಲತಾ ಮಹತ್ವದ ನಿರ್ಧಾರ ಪ್ರಕಟನೆ- ನಟ ದರ್ಶನ್ ಹಾಜರು
ಈಗಾಗಲೇ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗುತ್ತಿದ್ದು 100ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು ಜೊತೆಗೆ ಮನೆ, ಗುಡಿಸಲುಗಳನ್ನು ಕಳೆದುಕೊಂಡು ಕರೆಂಟ್ ಇಲ್ಲದೇ ಜನ ಕತ್ತಲಲ್ಲಿ ಒಂದಿನ ಕಳೆದಿದ್ದಾರೆ. ಇದನ್ನು ಓದಿ: ತಾಯಿ ಮುಂದೆ ಬಿ ಫಾರಂ ಪಡೆದ ಯದುವೀರ್
