ಮಚ್ಚಿನಿಂದ ಕೊಚ್ಚಿ ಪೊಲೀಸರಿಗೆ ಶರಣಾದ ಗಂಡ – ಮಾರಕಾಸ್ತ್ರ ನೋಡಿ ಬೆಚ್ಚಿಬಿದ್ದ ಸ್ಥಳೀಯರು
ಗದಗ: ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಪತಿಯಿಂದ ಪತ್ನಿಯ ಕೊಲೆಗೆ ಯತ್ನಿಸಿರುವ ಘಟನೆ ಮುಂಡರಗಿ ಪಟ್ಟಣದ ಅಂಚೆ ಕಚೇರಿ ಬಳಿ ನಡೆದಿದೆ
ಗೀತಾ ಬೇಲೂರಪ್ಪ ಪೂಜಾರ(35) ಹಲ್ಲೆಗೊಳಗಾದ ಹೆಂಡತಿ. ಬೇಲೂರಪ್ಪ ಪೂಜಾರ ಕೌಟುಂಬಿಕ ಕಲಹ ಹಿನ್ನಲೆ ಹೆಂಡತಿ ಮೇಲೆ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಬೆಕ್ಕು ರಕ್ಷಿಸಲು ಬಾವಿಗೆ ಬಿದ್ದ ಒಂದೇ ಮನೆಯ ಐವರು ಸಾವು
ಗೀತಾ ಅವರು ಆಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು. ಆರೋಪಿ ಹಲ್ಲೆ ಮಾಡಿದ ಬಳಿಕ ಮಾರಕಾಸ್ತ್ರ ಹಿಡಿದು ಸ್ಥಳದಲ್ಲೇ ನಿಂತಿದ್ದ. ಅದನ್ನ ನೋಡಿದ ಸ್ಥಳೀಯರು ಬೆಚ್ಚಿ ಬಿದಿದ್ದಾರೆ. ಇದನ್ನೂ ಓದಿ: ಹೆಚ್ಡಿಕೆ ತೊಟದ ಮನೆಯಲ್ಲಿ ಆಯೋಜಿಸಿದ್ದ ಔತಣಕೂಟ ರದ್ದು
ಗಾಯಗೊಂಡ ಮಹಿಳೆಯನ್ನು ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಭರ್ಜರಿ ಕಾರ್ಯಚರಣೆ – 18.28 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಸೀಜ್
