Crime NewsLatestರಾಷ್ಟ್ರೀಯ-National

ಬೆಕ್ಕು ರಕ್ಷಿಸಲು ಬಾವಿಗೆ ಬಿದ್ದ ಒಂದೇ ಮನೆಯ ಐವರು ಸಾವು

ಮಹಾರಾಷ್ಟ್ರ: ಪಾಳು ಬಾವಿಯಲ್ಲಿ ಬಿದ್ದಿದ್ದ ಬೆಕ್ಕನ್ನು ರಕ್ಷಿಸಲ್ಲೆಂದು ಒಂದೇ ಮನೆಯ ಆರು ಜನ ಬಾವಿಗೆ ಇಳಿದು ಸಾವನ್ನಪ್ಪಿರುವ ಘಟನೆ ನೆವಾಸ ತಾಲೂಕಿನ ವಕಾಡಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಘಠನೆಯಲ್ಲಿ ಐದು ಜನ ಮೃತಪಟ್ಟಿದ್ದಾರೆ.

ಪಾಳು ಬಿದ್ದ ಬಾವಿಯನ್ನು ಮುಚ್ಚಲಾಗಿತ್ತು. ಆದರಲ್ಲಿ ಕಸವನ್ನು ಶೇಖರಣೆ ಮಾಡಲಾಗಿತ್ತು. ಹೀಗಾಗಿ ಅದರಲ್ಲಿ ವಿಷ ಅನಿಲ ಸೇರಿರಬಹುದು ಎನ್ನಲಾಗುತ್ತಿದೆ. ಇದೇ ಬಾವಿಗೆ ಮನೆಯ ಬೆಕ್ಕು ಬಿದ್ದಿದೆ. ಇದನ್ನು ಗಮನಿಸಿದ ಮನೆ ಮಂದಿ ಅದನ್ನು ಕಾಪಾಡಲೆಂದು ಮುಂದಾಗಿ ಒಬ್ಬರಂತೆ ಒಬ್ಬರು ಬಾವಿಗೆ ಇಳಿದಿದ್ದಾರೆ. ಒಟ್ಟು ಮನೆಯ ಆರು ಮಂದಿ ಬಾವಿಗೆ ಇಳಿದಿದ್ದು, ಐವರು ಮೃತಪಟ್ಟಿದ್ದು, ಒಬ್ಬರು ಮಾತ್ರ ಬದುಕುಳಿದಿದ್ದಾರೆ. ಇದನ್ನೂ ಓದಿ: ಮದ್ಯನೀತಿ ಹಗರಣ ಪ್ರಕರಣ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಕೇಜ್ರೀವಾಲ್

https://youtu.be/iMxTkg_jFTY?si=Sqa_sQ-frYhimUy3


ಬಾವಿಯಿಂದ ಶಬ್ಧ ಕೇಳಿ ನೆರೆಹೊರೆಯವರು ಹೋಗಿ ನೋಡಿ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಅವರ ಸಹಾಯದಿಂದ ಓರ್ವನನ್ನು ಬದುಕಿಸಿದ್ದಾರೆ. ಇದನ್ನೂ ಓದಿ: ಹಚ್‌ಡಿಕೆ ತೊಟದ ಮನೆಯಲ್ಲಿ ಆಯೋಜಿಸಿದ್ದ ಔತಣಕೂಟ ರದ್ದು

Share with Friends
author avatar
News Desk