ದ್ವಿತೀಯ ಪಿಯುಸಿ ಫಲಿತಾಂಶ ಪಕ್ರಟ.. ದಕ್ಷಿಣ ಕನ್ನಡ ಪ್ರಥಮ
ದ್ವಿತೀಯ ಪಿಯು ಮೊದಲು ಪರೀಖ್ಷೆಯ ಫಲಿತಾಂಶ ಪ್ರಕಟಣೆಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿದೆ.
ಮಂಡಳಿ ಅಧ್ಯಕ್ಷೆ ಮಂಜುಶ್ರೀ ಮತ್ತು ಪರೀಕ್ಷಾ ವಿಭಾಗದ ನಿರ್ದೇಶಕ ಗೋಪಾಲಕೃಷ್ಟ ಸೇರಿ ಹಲವು ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ.
2024 ರ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು 6 ಲಕ್ಷ 98,378 ವಿದ್ಯಾರ್ಥಿ ಅರ್ಹರಾಗಿದ್ದರು. ಇದರಲ್ಲಿ 6,81,079 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಈ ಬಾರಿ ಪರೀಕ್ಷೆಯಲ್ಲಿ 5 ಲಕ್ಷ ಸಾವಿರದ 690 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಹಾಗಾಗಿ ಉತ್ತಿರ್ಣದ ಪ್ರಮಾಣ ಶೇ.81. 15ರಷ್ಟಿದೆ. 2023ರಲ್ಲಿ 74.67 ರಷ್ಟಿತ್ತು. ಈ ಬಾರಿ ಏರಿಕೆ ಕಂಡಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜೆಲ್ಲೆ ಪ್ರಥಮ ಸ್ಥಾನ ಪಡೆದಿದೆ.
