Crime NewsLatestಬೆಂಗಳೂರು-Bengaluruರಾಜ್ಯ-Karnataka

ದೇಶಕ್ಕಾಗಿ ಹೋರಾಡಿದ ತಂದೆ.. ದೇಶಕ್ಕೆ ದ್ರೋಹ ಮಾಡಿದ ಮಗ – ರಾಮೇಶ್ವರಂ ಕೆಫೆ ಪ್ರಕರಣ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ಬ್ಲಾಸ್ಟ್ ಪ್ರಕರಣ ಹಿಂದೆ ಇರುವ ಮಾಸ್ಟರ್ ಮೈಂಡ್ ಅಬ್ದುಲ್ ತಾಹ ತಂದೆ ದೇಶಕ್ಕಾಗಿ ಹೋರಾಟಿದ ಯೋಧ ಎಂದು ತಿಳಿದು ಬಂದಿದೆ.

ಸದ್ಯ ಅಬ್ದುಲ್ ಮತೀನ್ ತಾಹನನ್ನು ಕೊನೆಗೂ ಎನ್‌ಐಎ ಅರೆಸ್ಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳದಿಂದ ವಿಚಾರಣೆಗಾಗಿ ಬೆಂಗಳುರಿಗೆ ಕರೆದುಕೊಂಡು ಬಂದಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ:  ಸಿಂಗಂ 2 ವಿಲನ್ ಅರುಳ್ ಮಣಿ ಹೃದಯಾಘಾತದಿಂದ ನಿಧನ

https://youtu.be/-Sk1lSZYsqM?si=_jMoloTLVo0KLRjy

ಬಾಂಬ್ ಬ್ಲಾಸ್ಟರ್ ಅಬ್ದುಲ್ ಮತೀನ್ ತಾಹ ಪದವೀಧರ .ಆತನ ತಂದೆ ದೇಶಕ್ಕಾಗಿ ಹೋರಾಡಿದ ನಿವೃತ್ತ ಯೋಧ.
ಅಬ್ದುಲ್​ ಮತೀನ್​ ತಾಹ ಅತ್ಯಂತ ಚುರುಕಾದ ಎಂಜಿನಿಯರಿಂಗ್ ಪದವೀಧರ. ತರ‍್ಥಹಳ್ಳಿಯಲ್ಲಿ ಪ್ರೌಢಶಾಲೆ ಮುಗಿಸಿ ಬೆಂಗಳೂರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದನು. ಬೆಂಗಳೂರಿಗೆ ಬಂದ ವೇಳೆ ಉಗ್ರರ ಸಂಪರ್ಕಕ್ಕೆ ಬಂದಿದ್ದನು. ಇದನ್ನೂ ಓದಿ:  ದೆಹಲಿ ಮುಖ್ಯ ಕಾರ್ಯದರ್ಶಿ ವಿರುದ್ಧ ಎಫ್‌ಐಆರ್

ಅಬ್ದುಲ್​ ಮತೀನ್​ ತಾಹ ಪೋಷಕರಿಗೆ ಒಬ್ಬನೇ ಮಗನಾಗಿದ್ದನು. ಐಇಡಿ ಬಾಂಬ್ ತಯಾರಿಕೆಯ ಎಕ್ಸ್’ರ‍್ಟ್ ಆಗಿದ್ದನು. ಕಳೆದ ನಾಲ್ಕು ರ‍್ಷಗಳಿಂದ ನಾಪತ್ತೆಯಾಗಿದ್ದ ಈತ. ವಿವಿಧ ರಾಜ್ಯಗಳಲ್ಲಿ ನಾನಾ ಹೆಸರುಗಳಿಂದ ತಲೆಮರೆಸಿಕೊಂಡಿದ್ದನು. ಇದನ್ನೂ ಓದಿ: ಬಿಆರ್‌ಎಸ್ ನಾಯಕಿ ಕವಿತಾ 3 ದಿನ ಸಿಸಿಬಿ ಕಸ್ಟಡಿಗೆ


ಈ ಹಿಂದೆ ಎನ್.ಐ.ಎ ಆತನ ಪತ್ತೆಗೆ ಮೂರು ಲಕ್ಷ ರಿವಾರ್ಡ್‌ ಘೋಷಿಸಿತ್ತು. ರಾಮೇಶ್ವರಂ ಕೆಫೆ ಬ್ಲಾಸ್ಟ್ ನಂತರ ಹತ್ತು ಲಕ್ಷ ರಿವರ‍್ಡ್ ಘೋಷಿಸಲಾಗಿತ್ತು. ಮಂಗಳೂರು ಕುಕ್ಕರ್ ಬ್ಲಾಸ್ಟ್, ರಾಮೇಶ್ವರಂ ಕೆಫೆ ಬ್ಲಾಸ್ಟ್, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಾಸ್ಟರ್ ಮೈಂಡ್ ಆಗಿದ್ದಾನೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ಬ್ಲಾಸ್ಟ್ ಪ್ರಕರಣ; ಶಂಕಿತ ಉಗ್ರರರು ಇಂದು ಬೆಂಗಳೂರಿಗೆ

ಇನ್ನು ಅಬ್ದುಲ್​ ಮತೀನ್​ ತಂದೆ ದೇಶಕ್ಕಾಗಿ ಹೋರಾಡಿದ ಯೋಧ. ವರ್ಷದ ಹಿಂದೆ ಅವರು ಮೃತಪಟ್ಟಿದ್ದರು. ಆದರೆ ಅವರಿಗಿದ್ದ ಒಬ್ಬನೇ ಮಗ ಇಂತಹ ದಾರಿ ಹಿಡಿದಿದ್ದಾನೆ ಎಂದರೆ ನಂಬಲು ಅಸಾಧ್ಯ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್‌ ಆರೆಸ್ಟ್- ಕೋಡ್‌ವರ್ಡ್‌ ಸಹಾಯದಿಂದ ಬಾಂಬ್‌ಬ್ಲಾಸ್ಟ್‌

https://youtu.be/AJtxmiMwIq8?si=3z5u30JtlnAyOEpB

Share with Friends
author avatar
News Desk