
ಕೀಡಗೇಡಿಗಳಿಂದ ಇರಾನ ಧ್ವಜ ಹಾರಾಟ.?
ಬೆಳಗಾವಿ:ಕುಡಚಿ ಪಟ್ಟಣದಹೊರವಲಯದಲ್ಲಿ ಇರಾನ್ ದೇಶದ ಧ್ವಜ ಹಾರಾಟಮಾಡಿಸಿದ್ದಾರೆ, ಕಿಡಿಗೇಡಿಗಳಿಂದ ಈ ಕೆಲಸ ಆಗಿರುವುದು ವ್ಯಕ್ತವಾಗಿದೆ.
ಕರ್ನಾಟಕದಲ್ಲಿ ಹಾರಾಡಿತು ಇರಾನ್ ದೇಶದ ರಾಷ್ಟ್ರ ಧ್ವಜ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ.
ಎರಡು ದಿನಗಳ ಹಿಂದೆಯೇ ಈ ಘಟನೆ ನಡಿದಿದ್ದು,ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಇರಾನ್ ನ ಧ್ವಜ ಹಾರಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ.
ಈ ಘಟನೆ ಕುಡಚಿಯ ಪೊಲೀಸ್ ಠಾಣಾ ವ್ಯಾಪ್ತಿ ಹತ್ತಿರ ನಡೆದಿದೆ.ಧ್ವಜ ಹಾರಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ವಿಡಿಯೋ ಆಗಿ ಕಾಣಿಸಿಕೊಂಡಿದೆ.
ಯಾರು ಯಾವ ಕಾರಣಕ್ಕೆ ಇರಾನ್ ಧ್ವಜ ಹಾರಿಸಿದ್ದಾರೆ ಎಂದು ತಿಳಿದು ಬಂದಿಲ್ಲ,ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಕಿಡಿಗೇಡಿಗಳ ಪತ್ತೆಗೆ ಬಲೇ ಬೀಸಿದ್ದಾರೆ.
