ಸರ್ಕಾರಿ ಬಸ್ನಲ್ಲಿ ಬಿಕಿನಿ ತೊಟ್ಟು ಸಂಚರಿಸಿದ ಮಹಿಳೆ
ದೆಹಲಿ ಯಾವುದಾರೊಂದು ವಿಷಯಕ್ಕೆ ಸುದ್ದಿಯಾಗುತ್ತಲೆ ಇರುತ್ತೆ. ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಸರ್ಕಾರಿ ಬಸ್ನಲ್ಲಿ ಪ್ರಯಾಣಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಜನ ಸಂದಣಿಯಿದ ಕೂಡಿದ್ದ ಡಿಟಿಸಿ ಬಸ್ ಅನ್ನು ಮಹಿಳೆಯೊಬ್ಬರು ಹತ್ತಿದ್ದು, ಆಕೆಯನ್ನು ಕಂಡು ಬಸ್ನಲ್ಲಿದ್ದವರು ಶಾಕ್ ಆಗಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಏಪ್ರಿಲ್ 20ರಂದು ಮತ್ತೆ ಕರ್ನಾಟಕಕ್ಕೆ
ಇದೇ ವೇಳೆ ಆಕೆ ಮತ್ತೊಬ್ಬ ಮಹಿಳೆಯ ಜೊತೆ ಕಿರಿಕ್ ಮಾಡಿಕೊಂಡಿದ್ದು, ಕೆಲಕಾಲ ಬಸ್ನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ವೀಡಿಯೋ ಸಾಮಾಜಿಕ ಜಾಲಕತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮಹಿಳೆಯ ವರ್ತನೆ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದ ಕಿಚ್ಚ ಸುದೀಪ್
ಇನ್ನು ಬಿಕಿನಿ ತೊಟ್ಟು ಬಸ್ ಏರಿದ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬರುತ್ತಿದೆ. ಸದ್ಯ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯ ವರ್ತನೆ ಹದಗೆಡುತ್ತಿದೆ. ರೀಲ್ಸ್ ಮನಾಡುವವರ ಸಂಖ್ಯೆಯೂ ಹೆಚ್ಚಾಗಿ ಕಾಣೂತ್ತಿದೆ. ಇವೆಲ್ಲದಕ್ಕೆ ಕಠಿಣ ಕಾನೂನು ಮತ್ತು ಶಿಕ್ಷೆ ವಿಧಿಸಿದರೆ ಇಂತಹ ಘಟನೆ ಮರುಕಳಿಸಲು ಎಂದು ಸಾರ್ವಕಜನುಕರು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ರಾಮಮಂದಿರದಲ್ಲಿ ಬಾಲರಾಮನ ಹಣೆಯ ಸ್ಪರ್ಶಿಸಿದ ಸೂರ್ಯರಶ್ಮಿ
