Crime NewsLatest

40ಕ್ಕೂ ಹೆಚ್ಚು ಪೊಲೀಸರು ಬಂದು ಹೊಡೆದಿದ್ದಕ್ಕೆ ಸುಳ್ಳು ಹೇಳಿದ್ದೇವೆ

ಮೈಸೂರು: ಶನಿವಾರ 40ಕ್ಕೂ ಹೆಚ್ಚು ಪೊಲೀಸರು (Police) ಬಂದು ಹೊಡೆದಿದ್ದಾರೆ. ಏಟಿನ ಭಯದಿಂದ ನಾವು ಕೆಲ ಸುಳ್ಳು ಹೇಳಬೇಕಾಯ್ತು ಎಂದು ರಾಜ್‌ಗೋಪಾಲ್ (Rajgopal) ಅವರ ತೋಟದ ಮನೆಯ ಕಾರ್ಮಿಕರು (Workers) ಅಳಲು ತೋಡಿಕೊಂಡಿದ್ದಾರೆ.

ರಾಜ್‌ಗೋಪಾಲ್ ಅವರ ಹುಣಸೂರು (Hunasuru) ಪಟ್ಟಣದಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಕಾಳೇನಹಳ್ಳಿಯಲ್ಲಿ ತೋಟದ ಮನೆಯಲ್ಲಿ ಅಪಹರಣಕ್ಕೆ ಒಳಗಾದ ಸಂತ್ರಸ್ತೆ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ತೋಟದ ಮನೆಗೆ ಹೋಗಿತ್ತು. ಈ ವೇಳೆ ಅಲ್ಲಿದ್ದ ಇಬ್ಬರು ಕೆಲಸಗಾರರ ಬಳಿ ಮಹಿಳೆಯ ಬಗ್ಗೆ ಮಾತನಾಡಿಸಿದಾಗ ಬಹಳ ಸ್ಫೋಟಕ ವಿಚಾರಗಳು ಹೊರಬಿದ್ದಿದೆ.

ರಾಜ್‌ಗೋಪಾಲ್ ಯಾರು?
ರಾಜಗೋಪಾಲ್ ಅವರು ಹುಣಸೂರು ತಾಲ್ಲೂಕಿನ ಹೊಸೂರು ಕೊಡಗು ಕಾಲೊನಿ ಗ್ರಾಮದ ನಿವಾಸಿಯಾಗಿದ್ದಾರೆ. ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದಾಗ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು. ಏಳು ವರ್ಷದ ಹಿಂದೆ ತೋಟದ ಮನೆ ನಿರ್ಮಿಸಿದ್ದ ಇವರು ರೇವಣ್ಣ ಅವರಿಗೆ ಸಂಬಂಧಿಸಿದ ಪ್ರಮುಖ ಕಡತಗಳನ್ನು ನಿರ್ವಹಿಸುತ್ತಿದ್ದಾರೆ.ಇದನ್ನೂ ಓದಿ: ಪತಿ ಬಂಧನ, ಈಗ ಪತ್ನಿ ಭವಾನಿಗೂ ಸಂಕಷ್ಟ?

https://youtu.be/HPmXeEmh748?si=aBnuPCkxUGJv9NnR

ಈ ವೇಳೆ ಒಬ್ಬ ಕಾರ್ಮಿಕ ಮಾತನಾಡಿ, ನಿನ್ನೆ 40 ಹೆಚ್ಚು ಪೊಲೀಸರು ಇಲ್ಲಿಗೆ ಆಗಮಿಸಿದ್ದರು. ನಮ್ಮ ಜೊತೆ ಮಾತನಾಡಿ ಹೊಡೆಯಲು ಆರಂಭಿಸಿದರು. ಈ ವೇಳೆ ನಾನು ಪ್ರಶ್ನೆ ಮಾಡಿ ನನಗೆ ಯಾಕೆ ಹೊಡೆಯುತ್ತೀರಿ ಎಂದು ಕೇಳಿದೆ. ಎರಡು ಪೆಟ್ಟು ಹೊಡೆದ ನಂತರ ನನಗೆ ಹೊಡೆಯುವುದನ್ನು ನಿಲ್ಲಿಸಿದರು ಎಂದು ಹೇಳಿದರು.ಇದನ್ನೂ ಓದಿ: ಮಹಿಳೆ ಕಿಡ್ನ್ಯಾಪ್ ಕೇಸ್‌ನಲ್ಲಿ ರೇವಣ್ಣ ಅರೆಸ್ಟ್- ಇಂದು ಸಂಜೆಯೊಳಗೆ ಜಡ್ಜ್ ಮುಂದೆ ರೇವಣ್ಣ ಹಾಜರು

ಯಾಕೆ ಹೊಡೆದಿದ್ದು ಎಂದು ಪ್ರಶ್ನಿಸಿದ್ದಕ್ಕೆ, ಆ ಮಹಿಳೆಯನ್ನು ಹೊರಗೆ ಬಿಟ್ಟಿದ್ದು ಯಾಕೆ ಎಂದು ನಮ್ಮನ್ನು ಪ್ರಶ್ನಿಸಿ ಹೊಡೆದರು. ನಾನು ಮನೆಯ ಮಾಲೀಕರು ಹೇಳಿದಂತೆ ಕೆಲಸ ಮಾಡುತ್ತೇನೆ. ನೀವು ಯಾವುದೇ ವಿಚಾರ ಇದ್ದರೂ ಮಾಲೀಕರನ್ನು ಕೇಳಿ. ನಮಗೆ ವಿಚಾರ ಗೊತ್ತಿಲ್ಲ. ನಮ್ಮನ್ನು ಯಾಕೆ ಹೊಡೆಯುತ್ತೀರಿ ಎಂದು ಪ್ರಶ್ನಿಸಿದೆ ಎಂದು ಕಾರ್ಮಿಕ ಉತ್ತರಿಸಿದರು.ಇದನ್ನೂ ಓದಿ: ಸಂತ್ರಸ್ತೆ ಕಿಡ್ನಾಪ್ ಕೇಸ್: ಸಂತ್ರಸ್ತ ಮಹಿಳೆ ಸಿಕ್ಕ ತೋಟದ ಸಿಬ್ಬಂದಿ ಸ್ಫೋಟಕ ಹೇಳಿಕೆ

https://youtu.be/8r8XkFbaG34?si=k3JvU0-_72k7xhIG

ಈ ವೇಳೆ ಮತ್ತೊಬ್ಬ ಕೆಲಸಗಾರನಿಗೆ ಹೊಡೆದ ವಿಚಾರವನ್ನು ತಿಳಿಸಿದ ಅವರು, ಅವನಿಗೆ ದೊಣ್ಣೆಯಲ್ಲಿ ಹೊಡೆದಿದ್ದಾರೆ. ಅವನಿಗೆ ಭಯ ಜಾಸ್ತಿ. ಯಾವಾಗ ಏಟು ಹೊಡೆದರೋ ಈಗ ಇವನು ಸುಳ್ಳು ಹೇಳುವ ಸನ್ನಿವೇಶಕ್ಕೆ ಬಂದಿದ್ದಾನೆ. ಏಟು ಹೊಡೆಯುವುದನ್ನು ನಾನೇ ಕಣ್ಣಾರೆ ಕಂಡಿದ್ದೀನಿ. ದೊಣ್ಣೆಯಿಂದ ಏಟು ತಿಂದ ಬಳಿಕ ಆತನಿಗೆ ಈಗ ಕೆಲಸ ಮಾಡಲು ಆಗುತ್ತಿಲ್ಲ. ನಿಜವಾಗಿ ಆ ಯಮ್ಮ ಯಾರು ಅಂತಾನೆ ಗೊತ್ತಿಲ್ಲ. ಇಲ್ಲಿಯವರೆಗೆ ನಾನು ಆಕೆಯನ್ನು ನೋಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನನ್ನಿಗೂ ಕಿಡ್ನಾಪ್‌ಗೂ ಯಾವುದೇ ಸಂಬಂಧವಿಲ್ಲ ಎಂದ ರೇವಣ್ಣ

https://youtu.be/M2KHexb54ZM?si=YWSg9CMg6rcWWDkJ
Share with Friends
author avatar
News Desk