ನನ್ನಿಗೂ ಕಿಡ್ನಾಪ್ಗೂ ಯಾವುದೇ ಸಂಬಂಧವಿಲ್ಲ ಎಂದ ರೇವಣ್ಣ
ಬೆಂಗಳೂರು: ಸಂತ್ರಸ್ತೆ ಕಿಡ್ನಾಪ್ (Kidnap) ಕೇಸ್ ಆರೋಪದ ಅಡಿಯಲ್ಲಿ ಬಂಧನಕೊಳ್ಳಕಾಗಿರುವ ರೇವಣ್ಣ (Revanna) ಅವರು ವಿಚಾರಣೆ ವೇಳೆ ಹೇಳಿದ್ದಾರೆ.
ಈವರೆಗೂ ನಡೆದ ವಿಚಾರಣೆಯಲ್ಲಿ ಅವರು ಯಾವ ವಿಚಾರದ ಬಗ್ಗೆಯೂ ಏನೂ ಬಾಯಿ ಬಿಟ್ಟಿರುವುದು ವರದಿಯಾಗಿಲ್ಲ. ಎಲ್ಲದಕ್ಕೂ ಅವರು ಮೌನವನ್ನು ಉತ್ತರವನಾಗಿ ನೀಡಿದ್ದಾರೆ. ಜೊತೆಗೆ ಅವರು ನನ್ನಿಗೂ ಈ ಕಿಡ್ನಾಪ್ ಸಂಬಂಧವಿಲ್ಲ ಎನ್ನುವ ಮಾತನೇ ಅವರು ಪದೇ ಪದೇ ವಿಚಾರಣೇಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಪತಿ ಬಂಧನ, ಈಗ ಪತ್ನಿ ಭವಾನಿಗೂ ಸಂಕಷ್ಟ?
ಎಚ್.ಡಿ. ರೇವಣ್ಣ (HD. Revanna) ಹಾಗು ಪ್ರಜ್ವಲ್ ರೇವಣ್ಣ(Prajwal Revanna) ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ. ಹೊಳೆನರಸೀಪುರದ ಮನೆಯಲ್ಲಿ ನಡೆದಿತ್ತೆನ್ನಲಾದ ಲೈಂಗಿಕ ಕಿರುಕುಳದ ದೂರನ್ನು ಮನೆಗೆಲಸದವರು ನೀಡಿದ್ದರು. ಅದರಲ್ಲಿ ರೇವಣ್ಣ ಎ1 ಆರೋಪಿ. ಆದರೆ, ಇದು ನಾನ್ ಬೈಲಬಲ್ ಕೃತ್ಯವೆಂದು ಪರಿಗಣಿಸಲಾಗಿಲ್ಲ. ಆದರೆ, ಕೆಆರ್ ನಗರದಲ್ಲಿ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಲಾಗಿರುವ ಪ್ರಕರಣದಲ್ಲಿ ರೇವಣ್ಣ ಎ1 ಆರೋಪಿಯಾಗಿದ್ದಾರೆ. ಇದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ಇದರಲ್ಲಿ ಅವರಿಗೆ ಜಾಮೀನು ಸಿಗುವುದಿಲ್ಲ. ಇದನ್ನೂ ಓದಿ: ಹೆಚ್ಡಿ. ರೇವಣ್ಣ ಬಂಧನ: ಕಾಡಿಸಿ, ಪೀಡಿಸಿ, ಮಹಿಳೆಯರನ್ನು ಅಪಹರಿಸಿದ್ದರಲ್ಲಿ ಪ್ರಮುಖ ಆರೋಪಿ : ಕಾಂಗ್ರೆಸ್
ಪ್ರಜ್ವಲ್ ರೇವಣ್ಣ ವಿರುದ್ಧ ನೇರವಾಗಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಎಂಪಿ ಹೌಸ್ನಲ್ಲಿ ತನ್ನ ಮೇಲೆ ಪ್ರಜ್ವಲ್ ಅತ್ಯಾಚಾರ ಎಸಗಿ ವಿಡಿಯೋ ರೆಕರ್ಡಿಂಗ್ ಮಾಡಿದ್ದಲ್ಲದೆ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎಂದು ಮಹಿಳೆಯೊಬ್ಬರು ದೂರು ಕೊಟ್ಟಿದ್ದಾರೆ. ಇದು ಬಹಳ ಗಂಭೀರ ಆರೋಪವಾಗಿದ್ದು ಪ್ರಜ್ವಲ್ ಅವರು ಬಂಧಿತರಾದರೆ ಜಾಮೀನು ಕೂಡ ಸಿಕ್ಕುವುದಿಲ್ಲ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಇಂದು ಮಂಗಳೂರಿಗೆ, ಶರಣಾಗ್ತಾರಾ?
