BlogLatestTop Storiesರಾಜ್ಯ-Karnatakaವಿಜಯಪುರ-Vijayapura

ಇದು ಅಂಗನವಾಡಿ ಕಟ್ಟಡವೋ..? ದನದ ಕೊಟ್ಟಿಗೆಯೋ..?

ವಿಜಯಪುರ : ಇದು ಅಂಗನವಾಡಿ ಕಟ್ಟಡವೋ ಅಥವಾ ದನದ ಕೊಟ್ಟಿಗೆಯೋ..? ದನದ ಕೊಟ್ಟಿಗೆಗಿಂತಲೂ ಕಡೆಯಾದ ಅಂಗನವಾಡಿ ಕಟ್ಟಡ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಅಂಗಡಗೇರಿ ಗ್ರಾಮದಲ್ಲಿರುವ ಅಂಗನವಾಡಿಯ ಅವ್ಯವಸ್ಥೆ ಇದು.

ಚಿಕ್ಕ ಚಿಕ್ಕ ಮಕ್ಕಳು ಅಕ್ಷರದ ಜ್ಞಾನ ಪಡೆಯುವ ದೇಗುಲದ ದುಸ್ಥಿತಿ ಇದು, ಪಾಳು ಬಿದ್ದ ಕಟ್ಟಡ ಹಾಗೂ ಶೆಡ್ಡಿನ ಮೆಲ್ಚಾವಣಿಯಲ್ಲಿ ಅಂಗನವಾಡಿ ನಡೆಸಲಾಗುತ್ತಿದ್ದು ಮಳೆ ಬಂದರೆ ಅಂಗನವಾಡಿಗೆ ರಜೆ‌ಕೊಡುವ ಸ್ಥಿತಿ ಉಂಟಾಗಿದೆ.

ಮಕ್ಕಳು ಅಂಗನವಾಡಿಯಲ್ಲಿ ಇರುವಾಗ ತಗಡಿನ ಮೆಲ್ಚಾವಣಿ ಕುಸಿದ್ರೆ ಮಕ್ಕಳ ಜೀವಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ಶೆಡ್ಡಿನಲ್ಲಿ ಮಕ್ಕಳು ಊಟ ಮಾಡಬೇಕು‌ ,ಕಲಿಕೆ ಕಲಿಯಬೇಕು.

Share with Friends
author avatar
News Desk