BlogLatestTop Storiesರಾಜ್ಯ-Karnataka

ಮತ್ತೆ ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ

ಮಂಡ್ಯ : ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಜಮೀನಿನಲ್ಲಿ ಇಂದು ನೂರಾರು ರೈತರೊಂದಿಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಭತ್ತ ನಾಟಿ ಮಾಡಿದ್ದಾರೆ.

ಬೆಳಗ್ಗೆ 11.30ಕ್ಕೆ ಭತ್ತ ನಾಟಿ ಕಾರ್ಯಕ್ರಮ ಆರಂಭವಾಗಲಿದೆ ಕಾರ್ಯಕ್ರಮ ಬಳಿಕ ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ ಗ್ರಾಮದ ಲಕ್ಷ್ಮಣ ಎಂಬುವವರ ಜಮೀನಿನಲ್ಲಿ ಭತ ನಾಟಿ ಮಾಡಿದರು. . ನಾಟಿ ಕಾರ್ಯ ಮುಗಿದ ಬಳಿಕ ರೈತರೊಂದಿಗೆ ಬೆರೆತು ಊಟ ಮಾಡಿದರು.

ಇಂದು ಸೀತಾಪುರಕ್ಕೆ ಹೆಚ್‌ಡಿಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಭತ್ತದ ನಾಟಿ ಜಮೀನು ಹದಗೊಳಿಸಿ ಸಜ್ಜುಗೊಳಿಸಿದ್ದಾರೆ. ಗ್ರಾಮದ ರೈತರು, ಮಹಿಳೆಯರು ಕೇಂದ್ರ ಸಚಿವರೊಂದಿಗೆ ಭತ್ತ ನಾಟಿ ಮಾಡುವ ಉತ್ಸಾಹದಲ್ಲಿದ್ದಾರೆ. ಸೀತಾಪುರ, ಅರಳಕುಪ್ಪೆ ಗ್ರಾಮಗಳಲ್ಲಿ ಕೇಂದ್ರ ಸಚಿವ ಹೆಚ್‌ಡಿಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ ಬ್ಯಾನರ್ ಗಳು ರಾರಾಜಿಸುತ್ತಿವೆ.

ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಜಮೀನಿನಲ್ಲಿ ಇಂದು ನೂರಾರು ರೈತರೊಂದಿಗೆ ‘ಮಣ್ಣಿನ ಮಗ’ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಭತ್ತ ನಾಟಿ ಮಾಡಲಿದ್ದಾರೆ. ಆ ಮೂಲಕ ಮಂಡ್ಯ ರೈತರೊಂದಿಗೆ ನಾನಿದ್ದೇನೆ ಎಂಬ ಸಂದೇಶ ನೀಡಿದ್ದಾರೆ.

2018ರಲ್ಲಿ ಸಿಎಂ ಆಗಿದ್ದಾಗಲೂ ಇದೇ ಗ್ರಾಮದಲ್ಲಿ ನೂರಾರು ರೈತರೊಂದಿಗೆ ಭತ್ತ ನಾಟಿ ಮಾಡುವ ಮೂಲಕ ತಾನು ‘ಮಣ್ಣಿನ ಮಗ’ ಎಂದು ಕುಮಾರಸ್ವಾಮಿ. ವಿರೋಧಿಗಳಿಗೆ ಟಕ್ಕರ್ ಕೊಟ್ಟಿದ್ದರು. ಇದೀಗ ಮತ್ತೆ ಕೇಂದ್ರ ಸಚಿವರಾಗಿರುವ ಹಿನ್ನೆಲೆ ಭತ್ತನಾಟಿ ಮಾಡಿದ್ದಾರೆ.

Share with Friends
author avatar
News Desk