Latestರಾಷ್ಟ್ರೀಯ-National

ಇಂದಿನಿಂದ ಎಲ್ಲಾ ಹೆದ್ದಾರಿಗಳ ಟೋಲ್‌ ದರ ಹೆಚ್ಚಳ

ನವದೆಹಲಿ: ಇಂದಿನಿಂದ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್‌ ದರ ಏರಿಕೆ ಆಗಲಿದೆ.

ಹೆದ್ದಾರಿ ಬಳಕೆದಾರರ ಶುಲ್ಕವನ್ನು ಶೇ 3% ರಿಂದ 5% ರಷ್ಟು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಹೆಚ್ಚಿಸಿದ್ದು ಸೋಮವಾರದಿಂದಲೇ ಜಾರಿಗೆ ಬಂದಿದೆ.

18ನೇ ಲೋಕಸಭೆಯ ಚುನಾವಣೆಗೆ ಮತದಾನ ಮುಗಿದ ಒಂದು ದಿನದ ನಂತರ ಟೋಲ್ ಪ್ಲಾಜಾ ದರಗಳಲ್ಲಿ ಪರಿಷ್ಕರಣೆಯಾಗಿದೆ. ಪ್ರತಿ ವರ್ಷ ಏಪ್ರಿಲ್‌ 1 ರಿಂದ ಈ ದರ ಜಾರಿಗೆ ಬರುತ್ತದೆ. ಆದರೆ ಚುನಾವಣೆ ಇದ್ದ ಕಾರಣ ಬಳಕೆದಾರರ ಶುಲ್ಕವನ್ನು ತಡೆ ಹಿಡಿಯಲಾಗಿತ್ತು. ಇದನ್ನೂ ಓದಿ: Election Results – ತಡವಾಗಲಿದೆ ಅಧಿಕೃತ ಫಲಿತಾಂಶ ಪ್ರಕಟ ಆದರೆ ಟ್ರೆಂಡ್‌ ಮಾತ್ರ ಬೇಗ

ಸುಮಾರು 1,100 ಟೋಲ್ ಪ್ಲಾಜಾಗಳಲ್ಲಿ ಸೋಮವಾರದಿಂದ ಟೋಲ್‌ ದರ ಏರಿಕೆಯಾಗಲಿದೆ. ಪ್ರತಿ ವರ್ಷ ಹಣದುಬ್ಬರ ಸೇರಿದ ಇತರ ಮಾನದಂಡಗಳನ್ನು ಪರಿಗಣಿಸಿ ದರ ಪರಿಷ್ಕರಣೆಯಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು, 2008 ರ ಅಡಿಯಲ್ಲಿ ಪ್ರತಿ ವರ್ಷ ಟೋಲ್‌ ದರ ಪರಿಷ್ಕರಣೆಯಾಗುತ್ತಿರುತ್ತದೆ. ಇದನ್ನೂ ಓದಿ: ಬಾಗಲಕೋಟೆ ಅಕ್ರಮ ಗರ್ಭಪಾತ ಪ್ರಕರಣ: ಕಂದಾಯ ಇಲಾಖೆಯ ಅಧಿಕಾರಿಯಿಂದ ಪ್ರತಿ ತಿಂಗಳು ಆರೋಪಿ ಖಾತೆಗೆ ಹಣ ವರ್ಗ

https://youtu.be/r32NMq7j5QU?si=9360SBEMP1pyu39P
Share with Friends
author avatar
News Desk