Crime NewsLatestರಾಷ್ಟ್ರೀಯ-National

ವಿಮಾನ ನಿಲ್ದಾಣ ಆಯ್ತು ಇದೀಗ ಮೆಂಟಲ್ ಆಸ್ಪತ್ರೆಗೆ ಬಾಂಬ್​ ಬೆದರಿಕೆ

ಚಂಡೀಗಢ: ಇತ್ತಿಚೆಗೆ ಬಾಂಬ್‌ ಬೆದರಿಕೆಗಳು (Bomb Threat) ಹೆಚ್ಚಾಗಿದ್ದು, ಇದೀಗ ಚಂಡೀಗಢದ (Chandigarh) ಮಾನಸಿಕ ಆರೋಗ್ಯ (Mental Health) ಆಸ್ಪತ್ರೆಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆಯ ಇ-ಮೇಲ್ (E-Mail) ಕಳುಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಾಂಬ್​ ಬೆದರಿಕೆ(Bomb Threat)ಗಳು ಹೆಚ್ಚಾಗುತ್ತಿವೆ, ಶಾಲೆ, ಆಸ್ಪತ್ರೆಗಳು, ವಿಮಾನಗಳಿಗೆ ಹೆಚ್ಚಿನ ಬೆದರಿಕೆಗಳು ಬಂದಿವೆ. ಇದೀಗ ಚಂಡೀಗಢದ ಮಾನಸಿಕ ಆಸ್ಪತ್ರೆ(ಗೆ ಬಾಂಬ್​ ಬೆದರಿಕೆಯ ಇ-ಮೇಲ್ ಬಂದಿದ್ದು, ಆತಂಕ ಸೃಷ್ಟಿ ಮಾಡಿದೆ. ಕೂಡಲೇ ರೋಗಿಗಳನ್ನು ಬೇರೆಡೆಗೆ ಕರೆದೊಯ್ಯಲಾಗಿದ್ದು, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅದೇ ಇಮೇಲ್ ಅನ್ನು ದೆಹಲಿ ಮತ್ತು ದಕ್ಷಿಣ ಭಾರತದ ಹಲವಾರು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಕುವೈತ್‌ನಲ್ಲಿ ಅಗ್ನಿ ಅವಘಡ- 4 ಭಾರತೀಯರು ಸೇರಿ 35 ಜನರ ಸಜೀವ ದಹನ

https://youtu.be/FHqtzTrSrK0?si=whrlp42RJHUz1jUA

ಇ-ಮೇಲ್ ಮೂಲಕ ಬಂದ ಬಾಂಬ್ ಬೆದರಿಕೆಯ ಬಗ್ಗೆ ನಮಗೆ ಆಸ್ಪತ್ರೆಯಿಂದ ಮಾಹಿತಿ ಬಂದಿದೆ, ತಪಾಸಣೆ ವೇಳೆ ಏನೂ ದೊರೆತಿಲ್ಲ, ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದ ಬಳಿಕ ಆಸ್ಪತ್ರೆ ತೆರೆಯಲಾಗುವುದು ಎಂದು ಡಿಎಸ್​ಪಿ ದಲ್ಬೀರ್​ ಸಿಂಗ್ ತಿಳಿಸಿದ್ದಾರೆ. ಅದೇ ಇಮೇಲ್ ಅನ್ನು ದೆಹಲಿ ಮತ್ತು ದಕ್ಷಿಣ ಭಾರತದ ಹಲವಾರು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾದಲ್ಲಿ ದರ್ಶನ್ ಅನ್‍ಫಾಲೋ‌, ಡಿಪಿ ಡಿಲೀಟ್ ಮಾಡಿದ ಪತ್ನಿ ವಿಜಯಲಕ್ಷ್ಮಿ!

https://youtu.be/0XTngRgbVWg?si=su_Rd5vNrLfK3GhH

ಚಂಡೀಗಢದ ಸೆಕ್ಟರ್ 32 ನಲ್ಲಿರುವ ಮಾನಸಿಕ ಆರೋಗ್ಯ ಸಂಸ್ಥೆಯ ಉಪ ವೈದ್ಯಕೀಯ ಅಧೀಕ್ಷಕಿ ಡಾ ಅಪರಾಜಿತಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆಗೆ ಬೆಳಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ರೋಗಿಗಳು, ವೈದ್ಯರು ಮತ್ತು ಇತರ ಉದ್ಯೋಗಿಗಳು ಸೇರಿದಂತೆ ಸುಮಾರು 100 ಜನರು ಇದ್ದರು ಎಂದು ಅವರು ಹೇಳಿದರು. ಇದನ್ನೂ ಓದಿ:ಜೂನ್‌ 24 ರಂದು 18ನೇ ಲೋಕಸಭೆಯ ಅಧಿವೇಶನ ಆರಂಭ

https://youtu.be/uNnqF6b4wzw?si=ApEES0M5Yz_0arFx
Share with Friends
author avatar
News Desk