EntertainmentLatest

ತಮಿಳು ಹಿರಿಯ ಗಾಯಕಿ ಉಮಾ ರಮಣನ್ ನಿಧನ

ತಮಿಳು (Tamil) ಚಿತದರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಉಮಾ ರಮಣನ್(Uma Ramanan) ಅವರು ಬುಧವಾರ ನಿಧಾನ ಹೊಂದಿದ್ದಾರೆ. ಅವರ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಉಮಾ ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು 35 ವರ್ಷಗಳ ಅವಧಿಯಲ್ಲಿ ಸುಮಾರು 6000ಕ್ಕೂ ಅಧಿಕ ಕಾನ್ಸ್‌ರ್ಟ್‌ಗಳಲಲ್ಲಿ ಹಾಡಿದ್ದಾರೆ. ಇವರು ತಮಿಳು ಸಿನಿಮಾಗಳಲ್ಲಿ ಸುಮಾರು ಮೆಲೋಡಿ ಹಾಡುಗಳನ್ನು ಹಾಡಿದ ಖ್ಯಾತಿ ಇದೆ. ಪತಿ ಅವಿ ರಮಣನ್ (Avi ramanan) ಅವರು ಸಹ ಖ್ಯಾತ ಗಾಯಕರು. ದಂಪತಿಗೆ ಓರ್ವ ಮಗ ಇದ್ದಾನೆ.

ಉಮಾ ರಮಣನ್ ಅವರು ಅವಿ ರಮಣನ್ ಅವರನ್ನು ಭೇಟಿ ಮಡಿದ ನಂತರ ದಂಪತಿ ಜಂಟಿಯಾಗಿ ಕಾರ್ಯಕ್ರಮ ನೀಡಲು ಪ್ರಾರಂಭಿಸಿದರು. ಅವರು ಇಳಯರಾಜ ಜೊತೆ ಕೆಲಸ ಮಾಡಲುಪ್ರಾರಂಭಿಸಿದ ಮೇಲೆ ಅವರ ಖ್ಯಾತಿ ಹೆಚ್ಚಾಯಿತ್ತು. ಇದನ್ನೂ ಓದಿ: ಪ್ರಜ್ವಲ್ ಪೆಡ್ರೈವ್ ಕೇಸ್- ಹೆಸರು ಬಹಿರಂಗಗೊಂಡರೆ ಆತ್ಮಹತ್ಯೆಯ ಬೆದರಿಕೆ ಒಡ್ಡಿರುವ ಸಂತ್ರಸ್ತೆಯರು

ಉಮಾ ಅವರು 1977 ರಲ್ಲಿ ರಿಲೀಸ್ ಆದ ಶ್ರೀ ಕೃಷ್ಣಲೀಲಾ ಮೋಹನ ಕಣ್ಣನ ಮುರಳಿ ಎಂಬ ಹಾಡ8ಇನ ಮೂಲಕ ಅವರು ಬಣ್ಣದ ಬದುಕನ್ನು ಆರಂಭಿಸಿದ್ದರು. ಇದನ್ನೂ ಓದಿ: ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪಿಹೆಚ್‌ಡಿ ವಿದ್ಯಾರ್ಥಿ ಅನುಮಾನಸ್ಪದ ಸಾವು

ನಂತರ ನೀಳಲ್ಗಳ್ ಸಿನಿಮಾದ ಪೂಂಗಾತವೇ ತಾಳ ತಿರವೈ. ಹಾಡನ್ನು ಹಾಡಿ ಉಮಾ ರಮಣ್ ಅವರು ಗಮನ ಸೆಳೆದರು. ಈ ಹಾಡು ಅವರ ವೃತ್ತಿ ಜೀವನವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಯಿತು. ಇದನ್ನೂ ಓದಿ: ಪ್ರಜ್ವಲ್ ಪೇನ್‌ಡ್ರೈವ್‌ ಕೇಸ್: ಪಿಎಂಗೆ ಪತ್ರ ಬರೆದ ಸಿಎಂ

https://youtu.be/Be99yrIDWss?si=g97tmcDtjmmyimiD

ಉಮಾ ಅವರು ಇಳಯರಾಜ ಕಂಪೋಸ್ ಮಾಡಿದ 100ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ವಿದ್ಯಾ ಸಾಗರ್, ಮಣಿ ಶರ್ಮಾ ಹಾಗೂ ದೇವ ಅವರು ಕಂಪೋಸ್ ಮಾಡಿದ ಹಾಡುಗಳನ್ನು ಕೂಡ ಹಾಡಿದ್ದಾರೆ. ಅವರು ಹಾಡಿದ ಪನ್ನೀರ್ ಪುಷ್ಪಂಗಳ್ ಸಿನಿಮಾದ ಆನಂದ ರಾಗಮ್, ತೆಂಡ್ರಾಲೆ ಎನ್ನೈ ತೊಡು ಸಿನಿಮಾದ ಕಣ್ಮಣಿ ನೀ ವರಾ ಸೇರಿ ಅನೇಕ ಹಾಡುಗಳು ಕೇಳುಗರ ಫೇವರಿಟ್ ಎನಿಸಿಕೊಂಡಿದೆ. 2005ರಿಂದ ಈಚೆ ಅವರು ಸಿನಿಮಾಗಾಗಿ ಹಾಡಿಲ್ಲ. ಇದನ್ನೂ ಓದಿ: ಎನ್‌ಅರ್‌ಬಿಸಿ ಕಜಾಲುವೆಗೆ ಬಿದ್ದು ಇಬ್ಬರು ಯುವಕರು ಸಾವು

ಉಮಾ ರಮಣ್ ನಿಧನವಾರ್ತೆ ತಮಿಳು ಚಿತ್ರರಂಗವನ್ನು ಶೋಕಕ್ಕೆ ತಳ್ಳಿದೆ. ಅನೇಕ ಸೆಲೆಬ್ರಿಟಿಗಳು ಉಮಾ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಅವರು ತಮಿಳು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತಿದ್ದಾರೆ. ಇದನ್ನೂ ಓದಿ: ವಿಚಾರಣೆಗೆ ಹಾಜರಾಗಲು 7 ದಿನ ಅವಕಾಶ ನೀಡುವಂತೆ ಪ್ರಜ್ವಲ್ ರೇವಣ್ಣ ಮನವಿ

https://youtu.be/VdisxEZw61M?si=0U-c7eZII52KaiI9
Share with Friends
author avatar
News Desk