Crime NewsLatestಬೆಂಗಳೂರು-Bengaluruರಾಜ್ಯ-Karnataka

ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಸುಂದರಿ ಅಂದರ್

ಬೆಂಗಳೂರು: ಸಾಲ ತೀರಿಸಲು ಮನೆ ಮಾಲಕಿಯನ್ನೇ (Owner) ಹತ್ಯೆ ಮಾಡಿದ್ದ ಯುವತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಮೋನಿಕಾ (24) ಬಂಧಿತ ಆರೋಪಿ. ಮೇ 10 ರಂದು ಕೆಂಗೇರಿ (Kengeri) ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ (Konasandra) ಒಂಟಿ ಮಹಿಳೆಯ ಕೊಲೆ ನಡೆದಿತ್ತು.

ಪ್ರರಣವೇನು?
ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡಿದ್ದ ಮೋನಿಕಾ ಮೂಲತಃ ಕೋಲಾರ ಜಿಲ್ಲೆಯವಳಾಗಿದ್ದು, ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಗುರುಮೂರ್ತಿ ಎಂಬವರ ಮನೆಯಲ್ಲಿ ಮೂರು ತಿಂಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದಳು. ಈ ವೇಳೆ ಆಕೆ ಪ್ರಿಯಕರನನ್ನೇ ತನ್ನ ಗಂಡ ಎಂದು ಹೇಳಿ ಬಾಡಿಗೆ ಮನೆ ಗಿಟ್ಟಿಸಿದ್ದಳು. ಆದ್ರೆ ಒಬ್ಬಂಟಿಯಾಗಿ ವಾಸವಿದ್ದ ಮೋನಿಕ ಮನೆಗೆ ಪ್ರಿಯಕರ ಆಗಾಗ ಬಂದು ಹೋಗುತ್ತಿದ್ದ. ಇದನ್ನೂ ಓದಿ: ಹೃದಯ ಕಾಯಿಲೆಯಿಂದ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲು

ಶೋಕಿಗಾಗಿ ಇತ್ತ ಮೋನಿಕಾ ವಿಪರೀತ ಕೈಸಾಲ ಮಾಡಿಕೊಂಡಿದ್ದಳು. ಜೊತೆ ಪ್ರಿಯಕರನಿಗೆ ಟಾಟಾ ಏಸ್ ವಾಹನ ಖರೀದಿಸಲು ಹಣ ಬೇಕಾಗಿತ್ತು. ಹೀಗಾಗಿ ಮನೆ ಮಾಲಕಿ ದಿವ್ಯಾ ಮೈಮೇಲಿದ್ದ ಚಿನ್ನದ ಒಡವೆ ಮೇಲೆ ಮೋನಿಕಾ ಕಣ್ಣು ಬಿದ್ದಿತ್ತು. ದಿವ್ಯ ಪತಿ ಗುರುಮೂರ್ತಿ ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ಶಾಪ್ ನಡೆಸುತ್ತಿದ್ದರು. ದಿವ್ಯಾ ಅತ್ತೆ ಮಾವ ಸಹ ಬೆಳಗಾದ್ರೆ ಕೆಲಸಕ್ಕೆ ಹೋಗುತ್ತಿದ್ದರು. ಇದನ್ನೂ ಓದಿ: ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ, ಮೂವರು ಅಪ್ರಾಪ್ತರು ಸೇರಿ 6 ಮಂದಿ ಬಂಧನ

https://youtu.be/am20I7-S2dU?si=bwxhD5rBA4HsU_uI

ದಿವ್ಯಾ ಹಾಗೂ ಆಕೆಯ 2 ವರ್ಷದ ಮಗು ಮಾತ್ರ ಮನೆಯಲ್ಲಿರುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದು ಕುತ್ತಿಗೆ ಹಿಸುಕಿ ಮೋನಿಕಾ ಕೊಲೆ ಮಾಡಿದ್ದಳು. ಕೊಲೆ ಮಾಡಿ ಕುತ್ತಿಗೆಯಲ್ಲಿದ್ದ 36 ಗ್ರಾಂ ಚಿನ್ನದ ಸರ ಕಸಿದುಕೊಂಡುತ್ತಿದ್ದಳು. ಸದ್ಯ ಪ್ರಕರಣ ದಾಖಲಿಸಿ ಮೋನಿಕಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನೇಹಾ ಮಾದರಿಯ ಮತ್ತೊಂದು ಕೊಲೆ – ನೇಹಾ ಮಾದರಿಯಲ್ಲಿ ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ

https://youtu.be/lwT9p6w4n0U?si=J7maMzt3_E3l2i5r
Share with Friends
author avatar
News Desk