BlogLatestಬೆಂಗಳೂರು-Bengaluru

ಬೆಂಗಳೂರಿಗರೇ ಗಮನಿಸಿ : ಅ.3 ಮತ್ತು 4 ರಂದು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ಮೆಟ್ರೋ ಹಸಿರು ಮಾರ್ಗದಲ್ಲಿ ಮಾದಾವರ – ನಾಗಸಂದ್ರ ನಡುವೆ ಅಕ್ಟೋಬರ್ 3 ಹಾಗೂ 4 ರಂದು ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ. ಈ ಹಿನ್ನಲೆ ಗುರುವಾರದಂದು ನಾಗಸಂದ್ರದಿಂದ ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣದವರೆಗೂ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ತನಕ ರೈಲುಗಳ ಸಂಚಾರ ರದ್ದಾಗಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ನಮ್ಮ ಮೆಟ್ರೋ ರೈಲು ಮಾರ್ಗದ ಕಾಮಗಾರಿ ಹಿನ್ನೆಲೆ ಅಕ್ಟೋಬರ್‌ 3ರಂದು ನಮ್ಮ ಮೆಟ್ರೋ ರೈಲುಗಳ ಸಂಚಾರದಲ್ಲಿ ಭಾಗಶಃ ರದ್ದಾಗಲಿದೆ.

ಅಕ್ಟೋಬರ್ 3 ಹಾಗೂ 4 ರಂದು ನಾಗಸಂದ್ರ ಮತ್ತು ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಾಣಿಜ್ಯ ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಪೀಣ್ಯ ಇಂಡಸ್ಟ್ರಿ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆ ಎಂದಿನಂತೆ ಲಭ್ಯವಿರುತ್ತದೆ. ಬೆಳಿಗ್ಗೆ 9 ಗಂಟಿಗೆ ರೇಷ್ಮೆ ಸಂಸ್ಥೆಯಿಂದ ಹೊರಡುವ ಕೊನೆಯ ರೈಲು ನಾಗಸಂದ್ರ ನಿಲ್ದಾಣಕ್ಕೆ ತಲುಪಲಿದೆ ” ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.


ನೇರಳೆ ಮಾರ್ಗದ ಮೆಟ್ರೋ ರೈಲು ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಕೌಂಟ್ ಡೌನ್ :
ನಾಗಸಂದ್ರ ಹಾಗೂ ಮಾದಾವರ ನಮ್ಮ ಮೆಟ್ರೋ ರೆಡಿಯಾಗಿದ್ದು, ಸಂಚಾರಕ್ಕೆ ಕೌಂಟ್ ಡೌನ್ ಆರಂಭವಾಗಿದೆ.ಇನ್ನು ಮೆಟ್ರೋ ನಿಲ್ದಾಣದಲ್ಲಿ ಬಿರುಸಿನ ಕೆಲಸ ನಡೆಯುತ್ತಿದ್ದು, ಬಿಎಂಆರ್​ಸಿಎಲ್ ಮಾದವಾರ ಹೆಸರಿನ ನಿಲ್ದಾಣದ ನಮ್ಮ ಮೆಟ್ರೋ ಬೋರ್ಡ್ ಅಳವಡಿಸಿದೆ. ಇದು 3.7ಕಿ.ಮೀ ಉದ್ದದಲ್ಲಿ ಸಿದ್ದವಾಗಿರುವ ‌ನಾಗಸಂದ್ರ ಟು ಮಾದವಾರ ಮಾರ್ಗವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಧ್ಯದಲ್ಲಿ ಚಾಲನೆ ನೀಡಲಿದ್ದಾರೆ.

ಕಾಮಗಾರಿ 2017 ರಲ್ಲಿ ಬಿಎಂಆರ್ಸಿಎಲ್ ಆರಂಭ ಮಾಡಿತ್ತು. ಭೂಸ್ವಾಧೀನ ಮತ್ತು ಗುತ್ತಿಗೆದಾರರ ಆರ್ಥಿಕ ಸಂಕಷ್ಟ ಕಾರಣದಿಂದ ತಡವಾಗಿತ್ತು. ಏಳು ವರ್ಷಗಳ ಬಳಿಕ ಕಾಮಗಾರಿ ಕೊನೆಗೂ ಅಂತ್ಯವಾಗುವ ಹಂತಕ್ಕೆ ತಲುಪಿದೆ. ನೆಲಮಂಗಲ, ಮಾಕಳಿ, ಮಾದನಾಯಕನಹಳ್ಳಿ, ಹಾಸನ, ತುಮಕೂರಿನಿಂದ ನಗರಕ್ಕೆ ಬರುವವರೆಗೆ ಮೆಟ್ರೋ ಅನುಕೂಲವಾಗಲಿದೆ ಎನ್ನಲಾಗಿದೆ.

Share with Friends
author avatar
News Desk