ಜರ್ಮನಿಯಲ್ಲಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಪ್ರಜ್ವಲ್ ಗರ್ಲ್‍ಫ್ರೆಂಡ್- ಪ್ರೇಯಸಿಗೆ SIT ನೋಟಿಸ್
ಬೆಂಗಳೂರು: ಅತ್ಯಾಚಾರ ಆರೋಪದಡಿಯಲ್ಲಿ ಬಂಧನವಾಗಿರೋ ಹಾಸನದ (Hassan) ಮಾಜಿ ಸಂಸದ ಆರೋಪಿ ಪ್ರಜ್ವಲ್ ರೇವಣ್ಣಗೆ (Prajwal Revanna) ವಿದೇಶದಲ್ಲಿದ್ದಾಗ ಗರ್ಲ್‍ಫ್ರೆಂಡ್ ಸಹಾಯ ಮಾಡಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ವಿಶೇಷ ತನಿಖಾ ದಳ (SIT) ತನಿಖೆಯ ವೇಳೆ ಬಹಿರಂಗವಾಗಿದೆ.
ಆಶ್ಲೀಲ ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ಪ್ರಜ್ವಲ್ ರೇವಣ್ಣ ಸುಮಾರು 34 ದಿನಗಳ ಕಾಲ ಸಂಪರ್ಕಕ್ಕೂ ಸಿಗದೇ ಜರ್ಮನಿಗೆ ಹೋಗಿ ಅಡಿಗಿಕೊಂಡಿದ್ದ. ಈ ವೇಳೆ ಆರೋಪಿ ಪ್ರಜ್ವಲ್‍ಗೆ ಗರ್ಲ್‍ಫ್ರೆಂಡ್ ಸಹಾಯ ಮಾಡಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೆನಡಾದ ಬಿಲಿಯನೇರ್: ಫ್ರಾಂಕ್ ಸ್ಟ್ರೋನಾಚ್ ವಿರುದ್ಧ ರೇಪ್, ಲೈಂಗಿಕ ದೌರ್ಜನ್ಯದ ಆರೋಪ
ಹಾಗಾಗಿ ಎಸ್‍ಐಟಿ ಅಧಿಕಾರಿಗಳು ಆರೋಪಿ ಪ್ರಜ್ವಲ್ ಸ್ನೇಹಿತೆಗೆ ನೋಟಿಸ್ ಕೊಟ್ಟಿದ್ದಾರೆ. ಪ್ರಜ್ವಲ್‍ಗೆ ವಿದೇಶದಲ್ಲಿರುವಾಗ ಸಹಾಯ ಮಾಡಿರೋ ಬಗ್ಗೆ ದಾಖಲೆಗಳಿದ್ದು, ಪ್ರಕರಣ ಸಂಬಂಧ ಮಾಹಿತಿ ನೀಡುವಂತೆ ಕೋರಿ ಎಸ್‍ಐಟಿ ಅಧಿಕಾರಿಗಳು ಪ್ರಜ್ವಲ್ ಗರ್ಲ್‍ಫ್ರೆಂಡ್‍ಗೆ ನೋಟಿಸ್ ಕೊಟ್ಟಿದೆ. ಇದನ್ನೂ ಓದಿ: ದೇವನಹಳ್ಳಿ ಏರ್ಪೋಟ್ ನಲ್ಲಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ- 06 ಕೋಟಿ 29 ಲಕ್ಷ ಮೌಲ್ಯದ ಚಿನ್ನ ವಶ
