BlogCrime NewsLatestಬೆಂಗಳೂರು-Bengaluruರಾಜ್ಯ-Karnataka

ಜೈಲಲ್ಲಿ ದರ್ಶನ್ ಜೊತೆ ಕೂತು ಧಮ್ ಹೊಡೆಯುತ್ತಿರುವ ರೌಡಿ ಯಾರು ಗೊತ್ತೇ..? ಆತನ ಹವಾ ಹೇಗಿದೆ ಗೊತ್ತಾ..?

ಬೆಂಗಳೂರು : ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳ ಜೊತೆಗೆ ಕುಳಿತುಕೊಂಡು ನಟ ದರ್ಶನ್ ಧಮ್ ಹೊಡೆಯುತ್ತಿರುವ ಫೋಟೋ ವುರಲ್ ಆದ ಬೆನ್ನಲ್ಲೇ ಇದೀಗ ದರ್ಶನ ಜೊತೆ ಕುಳಿತಿದ್ದ ರೌಡಿಗಳ ಕ್ರಿಮಿನಲ್​ ಹಿಸ್ಟರಿ ಒಂದೊಂದಾಗೆ ಬಯಲಾಗುತ್ತಿವೆ. ದರ್ಶನ್ ಜೊತೆ ಜೈಲಿನಲ್ಲಿರುವ ಮತ್ತೊಬ್ಬ ವ್ಯಕ್ತಿ ಯಾರು ಗೊತ್ತಾ..? ಜೈಲಿನಲ್ಲಿ ಆತನ ಹವಾ ಹೇಗಿದೆ ಗೊತ್ತಾ..? ವಿಲ್ಸನ್ ಗಾರ್ಡನ್ ನಾಗ ಕ್ರೈಂ ಲೋಕದ ಪ್ರಾರಂಭದ ದಿನಗಳಲ್ಲಿ ನಾಗನಿಗೆ ಗುರುವಾಗಿದ್ದ ಆತ ಯಾರು ಗೊತ್ತಾ.? ಅವನ ಹೆಸರೇ ಶ್ರೀನಿವಾಸ್ ಅಲಿಯಾಸ್ ಕುಳ್ಳ ಸೀನ

ಸುಬ್ರಮಣ್ಯಪುರದ ಠಾಣ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣದಲ್ಲಿ 2006 ರಲ್ಲಿ ಜೈಲು ಸೇರಿರುವ ಶ್ರೀನಿವಾಸ್ ಅಲಿಯಾಸ್ ಕುಳ್ಳ ಸೀನ. ಕೊಲೆ ಪ್ರಕರಣದಲ್ಲಿ ಶ್ರೀನಿವಾಸ್ ಗೆ ಸಜೆ ಕೂಡ ಆಗಿದೆ. ಸಜೆ ಆಗಿರೋ ಖೈದಿಗಳಿಗಳು ಸಾಧಾರಣವಾಗಿ ಬಿಳಿ ಬಟ್ಟೆ ಹಾಕಬೇಕು. ಆದರೆ ಶ್ರೀನಿವಾಸ್ ಸಜೆ ಆದ್ರೂ ಬಿಳಿ ಬಟ್ಟೆ ಧರಿಸೋದಿಲ್ಲ. ಜೈಲಾಧಿಕಾರಿಗಲಿಗೆ ಶ್ರೀನಿವಾಸ್ ಕ್ಯಾರೆ ಅಂತಾನು ಅನ್ನಲ್ವಂತೆ.

ವಿಲ್ಸನ್ ಗಾರ್ಡನ್ ನಾಗನೇ ಜೈಲಿನಲ್ಲಿ ಶ್ರೀನಿವಾಸ್ ಗೆ ಕೇಕ್ ಕತ್ತರಿಸಿ ಬರ್ತ್​​​ಡೆ ಮಾಡಿದ್ದನು. ಕುಳ್ಳ ಸೀನನಿಗೆ ಏಕಾಏಕಿ ಜೈಲಿನಲ್ಲಿ ಗನ್ ಕೇಕ್ ಕತ್ತರಿಸಿ ಬರ್ತಡೆ ಸೆಲಬ್ರೇಷನ್ ಮಾಡಿದ್ದನು.ಇನ್ನು ಕುಳ್ಳ ಸೀನನು ವಿಲ್ಸನ್ ಗಾರ್ಡನ್ ನಾಗನ ಕ್ರೈಂ ಲೋಕದ ಪ್ರಾರಂಭದ ದಿನಗಳಲ್ಲಿ ಗುರುವಾಗಿದ್ದನು. ಹೀಗಾಗಿ ಇಬ್ಬರು ಈಗ ಜೈಲಿನಲ್ಲಿದ್ದು, ಜೈಲಿನಲ್ಲೇ ಗನ್ ಕೇಕ್ ಕತ್ತರಿಸಿ ಆತನ ಹವಾ ಎಂತದ್ದು ಎಂದು ನಾಗ ತೋರಿಸಿದ್ದನು.

Share with Friends
author avatar
News Desk