LatestTop Storiesಗದಗ-Gadag

ನರಗುಂದದಲ್ಲಿ ಹಂಚು ಮುರಿದು ಕಳ್ಳತನ -೫೦ ಸಾವಿರ ನಗದು ,ಚಿನ್ನಾಭರಣ ಪತ್ತೆ ..

ಗದಗ : ಗದಗ ಜಿಲ್ಲೆಯ ನರಗುಂದದ ಹಾಲಕೇರಿ ಬಡಾವಣೆಯ ಮನೆಯ ಮೇಲ್ಚಾವಣಿ ಹಂಚು ಮುರಿದು ಕಳ್ಳತನದ ಮಾಡಿರುವ ಘಟನೆಯೊಂದು ಕಂಡು ಬಂದಿದೆ. ಮತ್ತು ಮನೆ ಕೆಲಸಕ್ಕೆಂದು ಇಟ್ಟಿದ ಹಣವನ್ನು ಕದ್ದ ಖದೀಮರು ಪರಾರಿಯಾಗಿದ್ದಾರೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ .

ಬಡ ಕುಟುಂಬ ದಲ್ಲಿ ವಾಸಮಾಡುತ್ತಿದ್ದ ಮನೆಯವರು ತಮ್ಮ ಮನೆಯ ಕೆಲಸಕ್ಕಾಗಿ ಇಟ್ಟಿದ ಹಣ ಕಳ್ಳತನವಾಗಿದೆ .೫೦ ಸಾವಿರ ರೂಪಾಯಿ ನಗದು ,೧೦ ಗ್ರಾಂ ಚಿನ್ನದ ಓಲೆ ,ಮುಗುಬೊಟ್ಟು ಇಂತಹ ಬೆಲೆ ಬಾಳುವ ವಸ್ತುವನ್ನು ಕಳ್ಳತನ ಮಾಡಿದ್ದಾರೆ . ಕೆಲವು ದಿನಗಳಿಂದ ಮನೆಯನ್ನು ಗಮನಿಸಿದ ಖದೀಮರು ಯಾರು ಇಲ್ಲದ ಸಮಯವನ್ನು ನೋಡಿ ಕಳ್ಳತನದ ಕೆಲಸಕ್ಕೆ ಕೈ ಹಾಕಿದ್ದಾರೆ .

ಈ ಘಟನೆಯು ಗದಗ ಜಿಲ್ಲೆಯ ನರಗುಂದದ ಹಾಲಕೇರಿ ಬಡಾವಣೆಯ ಸುರೇಖಾ ಬಂಡಿವಡ್ಡರ್ ಎಂಬುವವರ ಮನೆಯಲ್ಲಿ ನಡೆದಿದೆ . ಮನೆ ರಿಪೇರಿ ಕೆಲಸಕ್ಕಾಗಿ ಸ್ವ ಸಹಾಯ ಗುಂಪುನಲ್ಲಿ ಸಾಲ ಪಡೆದಿದ್ದ ಮಹಿಳೆ ಮನೆಯ ಮೇಲ್ಛಾವಣಿ ಹಂಚು ಮುರಿದು ಕಳ್ಳತನ ಮಾಡಿದ್ದಾರೆ .ಈ ಘಟನೆ ನಡೆದ ನಂತರ ಮನೆಯಲ್ಲಿ ದುಡ್ಡು ಒಡವೆ ಕಳ್ಳತನ ವಾಗಿದೆ ಎಂದು ತಿಳಿದು ಬಂದ ನಂತರ ಗದಗ ಜಿಲ್ಲೆ ರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ .

Share with Friends
author avatar
Digital Desk