LatestTop Stories

ಅಂಬೇಡ್ಕರ್ ಪುತ್ತಳಿ ಸ್ಥಾಪನೆ ಕುರಿತು ಪತ್ರಿಕಾ ಮಾಧ್ಯಮ ಘೋಷ್ಠಿ..

ತುರುವೇಕೆರೆ : ಡಾ.ಬಿ ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮತ್ತು ಪ್ರತಿಷ್ಠಾಪನ ಸಾರ್ವಜನಿಕ ದತ್ತಿ ಟ್ರಸ್ಟ್ ನ ಖಜಾಂಚಿ ಶಿವಪ್ಪ ವಿರುದ್ಧ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ, ಕುಮಾರ್ ಆರೋಪ ಮಾಡಿದ್ದಾರೆ .

ಈ ಹಿಂದೆ ಪತ್ರಿಕಾ ಘೋಷ್ಠಿ ಒಂದರಲ್ಲಿ ಶಿವಪ್ಪ ರವರು ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿ ಪತ್ರಿಕಾ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ಅದರ ಹಿನ್ನೆಲೆ.

ದಂಡಿನ ಶಿವರ ಕುಮಾರ್ ಶಿವಪ್ಪ ರವರ ವಿರುದ್ಧ ಹರಿಹಾಯ್ದು ಶಿವಪ್ಪನವರು ಸರ್ಕಾರಿ ಸೇವೆಯಲ್ಲಿದ್ದಾಗ ಅಕ್ರಮ ಹಣ ಸಂಪಾದನೆ ಮಾಡಿದ್ದು, ಸರ್ಕಾರಿ ಅಧಿಕಾರಿಯಾಗಿದ್ದಾಗ , ದಲಿತರ ಜಮೀನನ್ನು ಮತ್ತು ಸರ್ಕಾರಿ ಜಮೀನನ್ನು ಅಕ್ರಮವಾಗಿ ಅವರ ಅಣ್ಣ ತಮ್ಮಂದಿರ ಹೆಸರಿನಲ್ಲಿ ಮಾಡಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದ್ದು ಅದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಮಾಧ್ಯಮದ ಮುಂದೆ ಇಡುತ್ತೇನೆ ಎಂದು ತಿಳಿಸಿದರು,

ಇದಲ್ಲದೆ ಶಿವಪ್ಪನವರು ನಮ್ಮ ತುರುವೇಕೆರೆ ತಾಲೂಕಿನ ಯಾವೊಬ್ಬ ದಲಿತ ಬಂಧುಗಳಿಗೆ ಒಂದು ರೂಪಾಯಿ ಸಹ ಸಹಾಯ ಮಾಡದೆ , ಯಾವುದೇ ಅಂಬೇಡ್ಕರ್ ಜಯಂತಿಗಳಿಗೆ ದಲಿತ ಸಮಸ್ಯೆಗಳಿಗೆ ಭಾಗಿಯಾಗದೆ , ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡಲು ಈಗ ಮುಂದಾಗಿರುವುದು ಎಷ್ಟು ಸರಿ?

ಹಲವು ವರ್ಷಗಳಿಂದ ದಲಿತಪರ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸಿ ಬಡವರಿಗೆ ಅನುಕೂಲವಾಗುವಂತ ಹೋರಾಟಗಳನ್ನು ಮಾಡಿ ಬಡವರಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದೇವೆ, ಆದರೆ ಹೊಸದಾಗಿ ಟ್ರಸ್ಟ್ ಮಾಡಿಕೊಂಡು ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡುತ್ತೇವೆ ಎಂದು ಈಗ ಬಂದಿರುವುದು ನಮಗೆಲ್ಲ ಅನುಮಾನ ಮೂಡಿಸುತ್ತಿದೆ ಎಂದರು.

Share with Friends
author avatar
Digital Desk