LatestTop Storiesಕೊಪ್ಪಳ-Koppalaಜಿಲ್ಲಾ ಸುದ್ದಿಗಳು | District News

ಗಣೇಶ ವಿಸರ್ಜನೆ ವೇಳೆ ಗಲಾಟೆ: ನಾಲ್ವರಿಗೆ ಚೂರಿ ಇರಿತ

ಕೊಪ್ಪಳ.ಸೆ.29- ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಯಲ್ಲಿ ನಾಲ್ವರು ಯುವಕರಿಗೆ ಚೂರಿಯಿಂದ ಇರಿದು ಗಾಯಗೊಳಿಸಿರುವ ಘಟನೆ ಗಂಗಾವತಿ ತಾಲೂಕಿನ ಆರ್ಹಾಳ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಮಧ್ಯರಾತ್ರಿ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಯುವಕರ ಗುಂಪೊಂದು ಡಿಜೆ ಹಾಕಿಕೊಂಡು ಕುಣಿಯುತ್ತಿತ್ತು. ಈ ವೇಳೆ ಕುಣಿಯದಂತೆ ಹೇಳಿದ ಮತ್ತೊಂದು ಗುಂಪಿನ ಯುವಕರೊಂದಿಗೆ ವಾಗ್ವಾದ ನಡೆದಿದೆ.

ಬಳಿಕ ಸೋಮವಾರವು ಯುವಕರ ಎರಡು ಗುಂಪುಗಳ ನಡುವೆ ಮತ್ತೆ ಗಲಾಟೆ ನಡೆದಿದ್ದು,ಈ ವೇಳೆ ನಾಲ್ವರಿಗೆ ಚೂರಿಯಿಂದ ಇರಿಯಲಾಗಿದೆ.ಗಾಯಗೊಂಡ ಜಯಪ್ರಕಾಶ್ ಹಾಗೂ ಗುರುಪ್ರಸಾದ್ ಸೇರಿದಂತೆ ನಾಲ್ವರನ್ನು ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಗೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share with Friends
author avatar
Digital Desk