BlogLatestಕೋಲಾರ-Kolaraರಾಜ್ಯ-Karnataka

ತಮ್ಮ ಭೂಮಿಗೆ ತೊಂದರೆಯಾಗದಂತೆ ಅರಣ್ಯ ಸರ್ವೇ ಮಾಡಲು ಗ್ರಾಮಸ್ಥರ ಮನವಿ

ಕೋಲಾರ : ಕೋಲಾರ ಜಿಲ್ಲಾ ಮುಳಬಾಗಿಲು ತಾಲ್ಲೂಕು ದುಗ್ಗಸಂದ್ರ ಹೋಬಳಿ ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅರಣ್ಯಕ್ಕೆ ಸಂಬಂಧಸಿದಂತೆ ಜಂಟಿ ಕಾರ್ಯ ಚರಣೆ ನಡೀತು ಇದರಲ್ಲಿ ಆ ಭಾಗದದ ಜನರು ನಮ್ಮ ಭೂಮಿಗೆ ಯಾವುದೇ ರೀತಿಯಾದ ತೊಂದರೆ ಮಾಡದೇ ತಾವು ಸರ್ವೇ ಮಾಡಿ ಅಂತ ಹೇಳಿದರು.

ಅದರಂತೆ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸಹಾ ಅದರಲ್ಲಿ ಯಾರಿಗೂ ಯಾವುದೇ ರೀತಿಯಾದ ತೊಂದರೆ ಆಗುವುದಿಲ್ಲ ಅಂತ ಆ ಭಾಗದ ರೈತರಿಗೆ ಧೈರ್ಯ ತುಂಬಿಸಿದರು ಇದರಂತೆ ಅರಣ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶದಂತೆ ಸರ್ಕಾರಿ ಅರಣ್ಯ ಅಷ್ಟೇ ಮಾತ್ರ ನಾವು ಸರ್ವೇ ಮಾಡುತ್ತೇವೆ ಅಂತ ಅರಣ್ಯ ಅಧಿಕಾರಿಗಳು ತಿಳಿಸಿದರು ಅದರಂತೆ ಅಲ್ಲಿರುವ ರೈತರು ಹಾಗೂ ಮುಖಂಡರು ಸ್ಪಂದಿಸಿದರು.

ಇದು ಸುಮಾರು ವರ್ಷಗಳಿಂದ ಇದೆ ರೀತಿ ನಡೀತಿದೆ. ಮುಂದಿನ ದಿನಗಳಲ್ಲಿ ಅದಕ್ಕೆ ಸಂಬಂದಿಸಿದಂತೆ ನಮಗೇನಾದ್ರೂ ತೊಂದರೆಯಾದರೆ ನಾವು ಹೋರಾಟ ಮಾಡಿ ನಮ್ಮ ಭೂಮಿಯನ್ನು ನಾವು ಸ್ವಾಧೀನ ಮಾಡಿಕೊಳ್ಳುತ್ತೇವೆ. ಅಂತ ಹೇಳಿದರು.

Share with Friends
author avatar
News Desk