ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಪವಿತ್ರಾ ಗೌಡ ಬಂಧನವಾದಾಗ ವಿಚಾರಣೆ ತಂಡದಲ್ಲಿದ್ದ ಮಹಿಳಾ ಪಿಎಸ್ಐಗೆ ನೋಟಿಸ್
ಬೆಂಗಳೂರು: ಪವಿತ್ರಾ ಗೌಡ (Pavithra Gowda) ಬಂಧನವಾದಾಗ ವಿಚಾರಣೆ ಮಾಡುವ ತಂಡದಲ್ಲಿದ್ದ ವಿಜಯನಗರ ಮಹಿಳಾ ಪಿಎಸ್ಐಗೆ ನೋಟಿಸ್ ನೀಡಲಾಗಿದೆ.
ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಮಹಿಳಾ ಪಿಎಸ್ಐ ನೋಟಿಸ್ ನೀಡಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಜೂನ್ 8 ರಂದು ರೇಣುಕಾಸ್ವಾಮಿ ಅಪಹರಣ ಮಾಡಿ ಕೊಲೆ ಮಾಡಲಾಗಿತ್ತು. ಮೃತದೇಹವನ್ನು ಸುಮನಹಳ್ಳಿ ಮೋರಿಯಲ್ಲಿ ಬಿಸಾಕಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 10 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಭಾರೀ ಮಳೆಗೆ ಸೋರಿದ ರಾಮಮಂದಿರ ಗರ್ಭಗುಡಿ – ಪ್ರಧಾನ ಅರ್ಚಕ ಆರೋಪ
