EntertainmentLatestಬೆಂಗಳೂರು-Bengaluruರಾಜ್ಯ-Karnataka

ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾ ಜೈಲಿನಿಂದ ಇಂದು ರಿಲೀಸ್

ಬೆಂಗಳೂರು: ರೇವ್ ಪಾರ್ಟಿಯಲ್ಲಿ (Rave Party) ಭಾಗಿಯಾಗಿ ಜೈಲು ಪಾಲಾಗಿದ್ದ ನಟಿ ಹೇಮಾ (Actress Hema) ಇದೀಗ ರಿಲೀಸ್ ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಎನ್‌ಡಿಪಿಎಸ್ ವಿಶೇಷ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು(Bail) ಪಡೆದಿರುವ ಹೇಮಾ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಜೂನ್ 12ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ಪ್ರಕ್ರಿಯೆ ವಿಳಂಬ ಆದ ಹಿನ್ನೆಲೆ ಇಂದು ಹೇಮಾರನ್ನು ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌: – ಡೀಲ್‌ ಮಾಡಲಾಗಿದ್ದ 30 ಲಕ್ಷ ಹಣ ವಶಕ್ಕೆ

https://youtu.be/ivtrR5vC0N8?si=36YNLHIg166EccBT

ಇತ್ತೀಚೆಗೆ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ನಟಿ ಭಾಗಿಯಾಗಿದ್ದರು. ನಾನು ಬೆಂಗಳೂರಿನಲ್ಲಿ ಇಲ್ಲ, ಹೈದರಾಬಾದ್‌ನಲ್ಲಿರೋದಾಗಿ ವಿಡಿಯೋ ಮಾಡಿ ಹೇಮಾ ದಿಕ್ಕು ತಪ್ಪಿಸಿದ್ದರು. ಬಳಿಕ ಪಾರ್ಟಿಯಲ್ಲಿದ್ದವರಿಗೆ ಮೆಡಿಕಲ್‌ ಟೆಸ್ಟ್‌ ಮಾಡಿಸಲಾಯಿತ್ತು. ಆದರಲ್ಲಿ ಡ್ರಗ್ಸ್ ಪಡೆದಿರುವ ಬಗ್ಗೆ ಪಾಸಿಟಿವ್ ರಿಪೋರ್ಟ್ ಬಂದ ಬೆನ್ನಲ್ಲೇ ನಟಿಗೆ 2 ಬಾರಿ ಪೊಲೀಸರು ನೋಟಿಸ್ ನೀಡಿದ್ದರು.‌ ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಸಿರಿ

https://youtu.be/scaejbJlrAQ?si=AIcg4nU4aHiyFy8E

ಬಳಿಕ ವಿಚಾರಣೆಗೆ ಬಂದ ಹೇಮಾರನ್ನು ಪೊಲೀಸರು ಬಂಧಿಸಿದ್ದರು. ಜೂನ್ 14ರವರೆಗೆ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಧೀಶರಾದ ಸಲ್ಮಾ ಎ.ಎಸ್ ಅವರಿದ್ದ ಪೀಠ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತ್ತು.

ಇವರು ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಖಾಯಂ ಪೋಷಕ ನಟಿಯಾಗಿ ಹೇಮಾ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಕಣಕ್ಕೆ ಇಳಿಯುವ ಸಾಧ್ಯತೆ

https://youtu.be/MqYiVxcb02I?si=_jAwqlo582LnfIv-
Share with Friends
author avatar
News Desk