Latestಬೆಂಗಳೂರು-Bengaluruರಾಜ್ಯ-Karnataka

ರೇವ್ ಪಾರ್ಟಿ ಪ್ರಕರಣ: ಗೈರಾದ ಹೇಮಾ & ಟೀಂಗೆ 2ನೇ ನೋಟಿಸ್ ನೀಡಿದ ಸಿಸಿಬಿ

ಫಾರ್ಮ್ ಹೌಸನಲ್ಲಿ ನಡೆದ ರೇವ್‌ ಪಾರ್ಟಿನಲ್ಲಿ (Rave Party) ನಟಿ ಹೇಮಾ (Actress Hema) ಪಾಲ್ಗೊಂಡಿದ್ದರು ಎಂಬುದಕ್ಕೆ, ತಾನು ಹೈದರಾಬಾದ್‌ನಲ್ಲಿ (Hyderabad) ಇದ್ದೇನೆ ಎಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಹೈಡ್ರಾಮಾ ಸೃಷ್ಟಿಸಿದ್ದ ತೆಲುಗು ನಟಿ ಹೇಮಾ (Actress Hema) ಆ್ಯಂಡ್ ಟೀಮ್‌ಗೆ ಸಿಸಿಬಿ (CCB) ಪೊಲೀಸರು ಎರಡನೇ ನೋಟಿಸ್ ನೀಡಿದ್ದಾರೆ.

ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ತೆಲುಗಿನ ಸಿನಿಮ ನಟರು, ನಟಿ ಹೇಮಾ ಸೇರಿದಂತೆ ಇತರರು ಗೈರಾಗಿದ್ದಾರೆ. ಇದೀಗ ಅವರಿಗೆ ಸೋಮವಾರ (ಮೇ 27) ವಿಚಾರಣೆಗೆ ಹಾಜರಾಗುವಂತೆ ನಟಿ ಹೇಮಾ ಸೇರಿ ಎಂಟು ಮಂದಿಗೆ ಸಿಸಿಬಿ ನೋಟಿಸ್ ನೀಡಿತ್ತು. ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲಾವಕಾಶ ಕೋರಿ ಸಿಸಿಬಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ನಟಿ ಹೇಮಾ ಆ್ಯಂಡ್ ಟೀಮ್‌ಗೆ ಸಿಸಿಬಿ ಅಧಿಕಾರಿಗಳು ಎರಡನೇ ನೋಟಿಸ್ (Notice) ನೀಡಿದ್ದಾರೆ. ಇದನ್ನೂ ಓದಿ: ಅಬ್ದುಲ್‌ ಕಲಾಂ ಹೇರ್‌ ಸ್ಟೈಲ್‌ ಬಗ್ಗೆ ಮಾತನಾಡಿದ್ದಾರಾ? – ಮಧು ಬಂಗಾರಪ್ಪ

https://youtu.be/JPM-sUI8J_U?si=0psxRXCZa4an_7-s

ಪಾರ್ಟಿ ಆಯೋಜನೆ ಮಾಡಿದ್ದ ವಾಸು, ಅರುಣ್, ಸಿದ್ದಿಕಿ, ನಾಗಬಾಬು ಸೇರಿ ಐವರಿಗೆ ಮೇ 27ರಂದು ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲು ಕೋರ್ಟ್ ಆದೇಶಿಸಿದೆ. ಇಂದಿನಿಂದ (ಮೇ 28) ಐವರು ಆರೋಪಿಗಳಿಗೆ ರೇವ್ ಪಾರ್ಟಿ ಆಯೋಜನೆ ಹಾಗೂ ಡ್ರಗ್ಸ್ ಸಪ್ಲೈ ಬಗ್ಗೆ ವಿಚಾರಣೆ ಮಾಡಲಿದ್ದಾರೆ ಸಿಸಿಬಿ ಅಧಿಕಾರಿಗಳು. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ – ನಿಗಮದಲ್ಲಿ 187 ಕೋಟಿ ಅವ್ಯವಹಾರವೆಂದದು ಡೆತ್‌ನೋಟ್‌ನಲ್ಲಿ ಉಲ್ಲೇಖ

https://youtu.be/dsSAhEc_2kQ?si=0FzdDN2bwHWAlWdd

ಅಂದಹಾಗೆ, ರೇವ್ ಪಾರ್ಟಿ ವಿಚಾರ ಬಯಲಾಗುತ್ತಿದ್ದಂತೆಯೇ ನಟಿ ಹೇಮಾ ಅವರು ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು. ವೀಡಿಯೋದಲ್ಲಿ ನಾನು ಹೈದರಾಬಾದ್‌ನಲ್ಲಿ ಇರುವುದಾಗಿ ಹೈಡ್ರಾಮಾ ಮಾಡಿದ್ದರು. ಇತ್ತ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಹೇಮಾ ಅವರು ಡ್ರಗ್ಸ್ ಪಾರ್ಟಿಯಲ್ಲಿ ಇದ್ದರು ಎಂಬುದಾಗಿ ಸ್ಪಷ್ಟನೆ ನೀಡಿದ್ದರು. ಬಳಿಕ ಹೇಂಾ ಅವರ ರಕ್ತದ ಮಾದರಿ ತೆಗೆದು ಪರೀಕ್ಷಿಸಿದ್ದಾಗ ಅವರು ಡ್ರಗ್ಸ್‌ ಸೇವಿಸಿರುವುದು ದೃಢಪಟ್ಟಿತ್ತು. ಅಲ್ಲದೇ ಪಾರ್ಟಿಯಲ್ಲಿ ಭಾಗವಹಿಸಿದ್ದ 103 ಮಂದಿಯ ಪೈಕಿ 86 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಇದನ್ನೂ ಓದಿ: ಸಿಎಂ, ಡಿಸಿಎಂ ತೀರ್ಮಾನ ಮಾಡಿದರೆ ಸರಿಯಾಗುವುದಿಲ್ಲ : ಪರಮೇಶ್ವರ್ ಅಸಮಾಧಾನ

https://youtu.be/CX3cL2Qp39Q?si=yuMlSIVSI7Z8L5xe

73 ಮಂದಿ ಪುರುಷರಲ್ಲಿ 59 ಮಂದಿ ಹಾಗೂ 30 ಮಂದಿ ಮಹಿಳೆಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಎಂದು ಬಂದಿತ್ತು. ಈ ಮೂಲಕ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು. ಇದನ್ನೂ ಓದಿ: ಕೊಪ್ಪಳದಲ್ಲಿ ಒಂದೇ ಕುಟುಂಬದ 3 ಜನ ಅನುಮಾನಾಸ್ಪದ ಸಾವು

Share with Friends
author avatar
News Desk