Crime NewsLatestಬೆಂಗಳೂರು-Bengaluruರಾಜ್ಯ-Karnataka

ರೇವ್‌ ಪಾರ್ಟಿ ಪ್ರಕರಣ: ನಟಿ ಹೇಮಾ ಸಿಸಿಬಿ ವಶಕ್ಕೆ

ಬೆಂಗಳೂರು: ರೇವ್ ಪಾರ್ಟಿಯಲ್ಲಿ (Rave Party) ಡ್ರಗ್ಸ್ (Drugs) ಸೇವಿಸಿದ್ದಾರೆ ಎಂದು ಆರೋಪಿಸಿ ಬಂಧನಕ್ಕೆ ಒಳಗಾಗಿರೋ ನಟಿ ಹೇಮಾರನ್ನು ಹೆಚ್ಚುವರಿ ವಿಚಾರಣೆಗಾಗಿ ಕೋರ್ಟ್‌ ಸಿಸಿಬಿ ವಶಕ್ಕೆ ನೀಡಿದೆ.

ರೇವ್ ಪಾರ್ಟಿಯಲ್ಲಿ (Rave Party) ಡ್ರಗ್ಸ್ (Drugs) ಸೇವಿಸಿದ್ದಾರೆ ಎಂದು ಆರೋಪಿಸಿ ಬಂಧನಕ್ಕೆ ಒಳಗಾಗಿರೋ ನಟಿ ಹೇಮಾರನ್ನು (Hema) ಇಂದು ಸಿಸಿಬಿ ಅಧಿಕಾರಿಗಳು ಆನೇಕಲ್ ಕೋರ್ಟ್‌ಗೆ (Court) ನಟಿ ಹಾಜರು ಪಡಿಸಿದ್ದರು. ಹೆಚ್ಚುವರಿ ವಿಚಾರಣೆಗಾಗಿ ಸಿಸಿಬಿ ವಶಕ್ಕೆ ನೀಡಬೇಕು ಎಂದು ಅಧಿಕಾರಿಗಳು ಕೋರ್ಟ್‍ಗೆ ಮನವಿ ಮಾಡಿದ್ದರು. ವಾದ ಆಲಿಸಿದ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 24 ಗಂಟೆಗಳ ಕಾಲ ಸಿಸಿಬಿ ವಶಕ್ಕೆ ಹೇಮಾರನ್ನು ಕೊಟ್ಟಿದೆ.ಇದನ್ನೂ ಓದಿ: ಮಹಾರಾಷ್ಟ್ರ ಸೋಲಿಗೆ ಹೊಣೆಹೊತ್ತು ಡಿಸಿಎಂ ಹುದ್ದೆಗೆ ದೇವೇಂದ್ರ ಫಡ್ನವಿಸ್‌ ರಾಜೀನಾಮೆ

https://youtu.be/lc15CaHVVn4?si=8DB3uch5fmlf6UNT

ಮೂರು ಗಂಟೆಯ ನಂತರ ನ್ಯಾಯಾಲಯದ ನ್ಯಾಯಾಧೀಶರಾದ ಎ.ಎಸ್ ಸಲ್ಮಾ ಅವರು 24 ಗಂಟೆಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ಸಿಸಿಬಿ ವಶಕ್ಕೆ ಪಡೆದ ನಂತರ ಕೋರ್ಟ್‌ನಿಂದ ಹೊರಬಂದ ವೇಳೆ ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದರು ಹೇಮಾ ಮತ್ತು ಆಕೆಯ ವಕೀಲ ಪಟಾಪಟ್ ಪ್ರಕಾಶ್. ಬಳಿಕ ವಿಶೇಷ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಹಾಕಲಾಗುವುದು ಎಂದರು.ಇದನ್ನೂ ಓದಿ: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನರೇಂದ್ರ ಮೋದಿ

https://youtu.be/qSTRrEiHOx4?si=JcPZy1abIeDPyu_T

ಹೇಮಾರನ್ನು ನಾಳೆ ಸಂಜೆ 6 ಗಂಟೆ ವರೆಗೆ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ. ನಾಳೆ ಸಂಜೆ 6 ಗಂಟೆ ವೇಳೆಗೆ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ ಸಿಸಿಬಿ ಪೊಲೀಸರು. ಹೇಮಾರನ್ನು ಕೋರ್ಟಿಗೆ ಹಾಜರು ಪಡಿಸಿದಾಗ ಹೈದ್ರಾಬಾದ್‌ನಿಂದ ಹೇಮಾ ಪುತ್ರಿ ಮತ್ತು ಕುಟುಂಬ ಆಗಮಿಸಿತ್ತು. ಕೋರ್ಟ್ ಹಾಲ್‌ನಲ್ಲಿ ನಿಂತು ಪುತ್ರಿ ಮತ್ತು ಕುಟುಂಬಸ್ಥರು ಕಾಯುತ್ತಿದ್ದರು.ಇದನ್ನೂ ಓದಿ: ವಿಷ ಸೇವಿಸಿ ದಂಪತಿ ಆತ್ಮಹತ್ಯೆ

Share with Friends
author avatar
News Desk