BlogLatestTop Stories

ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ

ಮುಂಬೈ: ರತನ್ ಟಾಟಾ ಅವರ ನಿಧನದ ಬೆನ್ನಲ್ಲೇ ಇದೀಗ ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ ಅವರು ನೇಮಕಗೊಂಡಿದ್ದಾರೆ.

ಟಾಟಾ ಟ್ರೆಂಟ್‌ನ ಅಧ್ಯಕ್ಷ ಮತ್ತು ಟಾಟಾ ಸ್ಟೀಲ್‌ನ ಉಪಾಧ್ಯಕ್ಷರಾದ ನೋಯೆಲ್ ಅವರನ್ನು ಇದೀಗ ಟಾಟಾ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಯಾರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಬೇಕು ಎಂಬ ವಿಚಾರದಲ್ಲಿ ನೋಯೆಲ್ ಟಾಟಾ ಅವರು ಅವಿರೋಧ ಆಯ್ಕೆಯಿಂದ ಈಗ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.

Share with Friends
author avatar
News Desk