Latestರಾಷ್ಟ್ರೀಯ-National

ಸಂಸದರಾಗಿ ಕೈಯಲ್ಲಿ ಸಂವಿಧಾನ ಪ್ರತಿ ಹಿಡಿದು ರಾಹುಲ್‌ ಗಾಂಧಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಕೈಯಲ್ಲಿ ಸಂವಿಧಾನ ಪ್ರತಿ ಹಿಡಿದು, ಭಾರತ್‌ ಜೋಡೋ ಘೋಷಣೆ ಕೂಗಿ ಕಾಂಗ್ರೆಸ್‌ (Congress) ಯುವನಾಯಕ ರಾಹುಲ್‌ ಗಾಂಧಿ (Rahul Gandhi) ಲೋಕಸಭಾ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ವಯನಾಡ್ ಮತ್ತು ರಾಯ್‌ಬರೇಲಿ ಎರಡು ಕ್ಷೇತ್ರಗಳಿಂದಲೂ ಆಯ್ಕೆಯಾಗಿದ್ದರು. ಈಗ ಅವರ ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲು ವಯನಾಡ್ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ಪುಣೆ ಪೋರ್ಶೆ ಕಾರು ಅಪಘಾತ- ಪ್ರಕರಣದ ಅಪ್ರಾಪ್ತ ಆರೋಪಿಗೆ ಜಾಮೀನು

https://youtu.be/97Xqp_kxIBQ?si=2f9gSR_TqiQOzv7a

ಇಂಡಿಯಾ ಒಕ್ಕೂಟದ ಸಂಸದರು ಸೋಮವಾರ ಸಂಸತ್ತಿನ ಅಧಿವೇಶದಲ್ಲಿ ಸಂವಿಧಾನದ ಕಿರುಪುಸ್ತಕ ಪ್ರದರ್ಶಿಸಿದರು. ಪಕ್ಷದ ಹಲವಾರು ಸಂಸದರು ಈ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದರು. ಸಂವಿಧಾನ ಕೈಪಿಡಿ ಹಿಡಿದು ರಾಹುಲ್‌ ಗಾಂಧಿ, ಸಂವಿಧಾನದ ಮೇಲೆ ದಾಳಿ ಮಾಡಲು ಪ್ರತಿಪಕ್ಷಗಳು ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಬಿಜೆಪಿಯವರಿಗೆ ಜನ, ದೇಶ, ದೇಶದ ಭವಿಷ್ಯ ಬಗ್ಗೆ ಕಾಳಜಿ ಇಲ್ಲ: ಪರಮೇಶ್ವರ್‌

https://youtu.be/OvXrOZlPR8I?si=ZA5Rwii3JPxFZjJD
Share with Friends
author avatar
News Desk