BlogLatestTop Storiesರಾಜ್ಯ-Karnataka

ನಾಯಿ ಮಾಂಸ ಗಲಾಟೆ : ಪುನೀತ್​ ಕೆರೆಹಳ್ಳಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಬೆಂಗಳೂರು : ಬೆಂಗಳೂರಿಗೆ ಬೇರೆ ರಾಜ್ಯದಿಂದ ನಾಯಿ ಮಾಂಸ ಸಾಗಾಟ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಹಿಂದೂ ಸಂಘಟನೆಯ ಮುಖಂಡ ಪುನೀತ್​ ಕೆರೆಹಳ್ಳಿ ಠಾಣೆಯಲ್ಲೇ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕಾಟನ್​ಪೇಟೆ ಪೊಲೀಸರು ಪುನೀತ್​ ಕೆರೆಹಳ್ಳಿ ಅವರನ್ನು ರಾತ್ರಿ 12 ಗಂಟೆ ವೇಳೆಗೆ ಬಂಧಿಸಿದ್ದರು. ಠಾಣೆಯಲ್ಲಿ ಮಲಗಿದ್ದ ಪುನೀತ್ ಮುಂಜಾನೆ 4.45ರ ವೇಳೆಗೆ ಅಸ್ವಸ್ಥಗೊಂಡಿದ್ದು ಕೆ.ಸಿ.ಜನರಲ್​​ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ರಾತ್ರಿ ಜೈಪುರದಿಂದ ಸುಮಾರು 50ಕ್ಕೂ ಹೆಚ್ಚು ಬಾಕ್ಸ್‌ಗಳಲ್ಲಿ 4,500 ಕೆಜಿ ಕುರಿ ಮಾಂಸ ಸಾಗಿಸಲಾಗಿದ್ದು, ಇದರಲ್ಲಿ ನಾಯಿ ಮಾಂಸವನ್ನು ಕೂಡಾ ಸೇರ್ಪಡೆ ಮಾಡಲಾಗಿದೆ ಎಂದು ಪುನೀತ್​ ಕೆರೆಹಳ್ಳಿ ಆರೋಪಿಸಿದ್ದಾರೆ.

ರೈಲಿನಿಂದ ಈ ಬಾಕ್ಸ್‌ಗಳನ್ನು ಹೊರಗೆ ತರುತ್ತಿದ್ದಂತೆ ಪುನೀತ್ ಕೆರೆಹಳ್ಳಿ ಮತ್ತು ಇತರರು ರೈಲು ನಿಲ್ದಾಣದಲ್ಲೇ ಬಾಕ್ಸ್‌ಗಳ ರವಾನೆಗೆ ಅಡ್ಡಿಪಡಿಸಿದ್ದರು. ಈ ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಇದೆ, ಸ್ವಚ್ಛವಾಗಿಲ್ಲ ಎಂದು ದೂರಿದ್ದರು.

https://sampoornanews.in/%e0%b2%85%e0%b2%b0%e0%b2%b5%e0%b2%bf%e0%b2%82%e0%b2%a6-%e0%b2%b2%e0%b2%bf%e0%b2%82%e0%b2%ac%e0%b2%be%e0%b2%b5%e0%b2%b3%e0%b2%bf-%e0%b2%ab%e0%b3%81%e0%b2%b2%e0%b3%8d-%e0%b2%86%e0%b2%95%e0%b3%8d

ಈ ಪ್ರಕರಣದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪುನೀತ್ ಕೆರೆಹಳ್ಳಿ ಬಂಧಿಸಲಾಗಿದ್ದು, ಸದ್ಯ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಮಾಂಸವನ್ನು ಬಿಬಿಎಂಪಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು ಗುಣಮಟ್ಟ ಹಾಗೂ ಮಾಂಸ ದೃಢೀಕರಣಕ್ಕಾಗಿ ಪರೀಕ್ಷೆಗೆ ಕಳುಹಿಸಿದ್ದಾರೆ.

Share with Friends
author avatar
News Desk