Latestತುಮಕೂರು-Tumakuruರಾಜಕೀಯ | Politicsರಾಜ್ಯ-Karnataka

ಪ್ರಜ್ವಲ್ ಅಂತಹ ಸ್ವಭಾವದ ಹುಡುಗ ಅಲ್ಲ: ಜಿ.ಎಸ್ ಬಸವರಾಜ್

ತುಮಕೂರು: ಪ್ರಜ್ವಲ್ ರೇವಣ್ಣ (Prajwal Revanna) ನನ್ನ ಆತ್ಮೀಯ ಸ್ನೇಹಿತ. ಅಂತಹ ಸ್ವಭಾವದ ಹುಡುಗ ಅಲ್ಲ ಎಂದು ಸಂಸದ ಜಿ.ಎಸ್ ಬಸವರಾಜ್ (G.s. Basavaraj) ಹೇಳಿದ್ದಾರೆ.

ತುಮಕೂರಿನಲ್ಲಿ (Tumkur) ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಜ್ವಲ್ ಅವರ ಮೇಲಿನ ಪ್ರಕರಣ ಸತ್ಯನೋ ಸುಳ್ಳೋ ಎಂಬುದು ತನಿಖೆ ಬಳಿಕ ತಿಳಿಯಲಿದೆ. ಏನು ಗ್ರಹಚಾರವೋ, ಯಾರ ಕೈವಾಡವೋ ಗೊತ್ತಿಲ್ಲ. ಇತ್ತೀಚೆಗೆ ಈ ರೀತಿ ತೇಜೋವಧೆ ಮಾಡುವುದು ಹೆಚ್ಚಾಗಿದೆ. ಜಾರಕಿಹೊಳಿಗೂ ಕೂಡ ಪಿತೂರಿ ಮಾಡಿ ಮನೆ ಹಾಳು ಮಾಡಿ ಮಾನ ಹರಾಜು ಹಾಕಿದ್ದಾರೆ ಎಂದರು.ಇದನ್ನೂ ಓದಿ:ಪ್ರಜ್ವಲ್ ಪೆನ್‌ಡ್ರೈವ್ ಕೇಸ್; ನಾನು ಆ ವೀಡಿಯೋ ನೋಡೋ ಧೈರ್ಯ ಮಾಡಲಿಲ್ಲ: ನಿಖಿಲ್ ಕುಮಾರಸ್ವಾಮಿ

https://youtu.be/EZRTqz4UhHw?si=fsu2KNyUbYZDynQX

ಜಾರಕಿಹೋಳಿ ಪ್ರಕರಣದಲ್ಲಿ ವಿರೋಧ ಪಕ್ಷದವರೇ ಪಿತೂರಿ ಮಾಡಿದ್ದರು. ಈಗಲೂ ಕೂಡ ವಿರೋಧ ಪಕ್ಷದವರೇ ಪಿತೂರಿ ಮಾಡಿರಬಹುದು. ಒಂದು ವೇಳೆ ಮಹಿಳೆಯರಿಗೆ ಅನ್ಯಾಯ ಆಗಿದ್ದರೆ ಶಿಕ್ಷೆ ಆಗಲೇಬೇಕು ಎಂದಿದ್ದಾರೆ. ಇದನ್ನೂ ಓದಿ: ಮೋದಿಯವರನ್ನು ಪ್ರಜ್ವಲ್ ಪೆನ್‌ಡ್ರೈವ್‌ ಪ್ರಕರಣದಲ್ಲಿ ಎಳೆದು ತರಬೇಡಿ: ನಿಖಿಲ್ ಕುಮಾರಸ್ವಾಮಿ

https://youtu.be/_5LhSqha57I?si=NP143pdVIaf8Hd5B
Share with Friends
author avatar
News Desk