Latestಬೆಂಗಳೂರು-Bengaluruರಾಜ್ಯ-Karnataka

ಕೊಟ್ಟಿರುವ ರೂಂ ಸರಿಯಿಲ್ಲ, ಕೆಟ್ಟ ವಾಸನೆ ಬರುತ್ತಿದೆಂದು ಜಡ್ಜ್‌ ಮುಂದೆ ಅಳಲು ತೋರಿಕೊಂಡ ಪ್ರಜ್ವಲ್‌

ಬೆಂಗಳೂರು: ಲೈಂಗಿಕ ದೌಜರ್ನ್ಯ, ರೇಪ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆರೋಪಿ ಪ್ರಜ್ವಲ್‌ ರೇವಣ್ಣ (Prajwal Revanna) ಅವರನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌ 6 ದಿನದ ಮಟ್ಟಿಗೆ ವಿಶೇಷ ತನಿಖಾ ತಂಡದ (SIT) ಕಸ್ಟಡಿಗೆ ನೀಡಿದೆ.

ಸದ್ಯ ಪ್ರಜ್ವಲ್ ರೇವಣ್ಣರನ್ನು ಸಿಐಡಿ ಕಚೇರಿಯಲ್ಲಿ ಇರಿಸಿಕೊಂಡಿರುವ ಎಸ್‌ಐಟಿ, ವಿಚಾರಣೆ ಶುರು ಮಾಡಿದೆ. ಮುಂದೆ ನಡೆಯುವ ಬೆಳವಣಿಗೆಗಳು ಕುತೂಹಲ ಕೆರಳಿಸಿದೆ. ಈ ನಡುವೆ ಪ್ರಕರಣ ತನಿಖಾ ಹಂತದಲ್ಲಿದ್ದು, ಯಾವುದೇ ರೀತಿ ನಕಾರಾತ್ಮಕ ಪ್ರಚಾರ ಮಾಡ್ಬೇಡಿ ಎಂದು ಪ್ರಜ್ವಲ್ ಪರ ವಕೀಲರು ಮಾಧ್ಯಮದವರನ್ನು ಕೋರಿದರು. ಇದನ್ನೂ ಓದಿ: ಭಾರತಕ್ಕೆ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ! ­ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂತು ಚಿನ್ನ

https://youtu.be/yNYq9wPJywU?si=tALnM5SRL3T5A6vv

ವಿಚಾರಣೆ ಸಂದರ್ಭದಲ್ಲಿ ಜಡ್ಜ್‌ ಮುಂದೆ ಪ್ರಜ್ವಲ್ ನನಗೆ ಕೊಟ್ಟಿರುವ ರೂಂ ಸರಿಯಿಲ್ಲ. ಕೆಟ್ಟ ವಾಸನೆ ಬರುತ್ತಿದ್ದು ಉಸಿರಾಟಕ್ಕೆ ತೊಂದರೆ ಆಗುತ್ತಿದೆ. ಇಲ್ಲಿ ಇರುವುದಕ್ಕೆ ಆಗುತ್ತಿಲ್ಲ, ನನಗೆ ಹಿಂಸೆ ಆಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: 6 ದಿನ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಕಸ್ಟಡಿಗೆ

https://youtu.be/CUYxqVGYCbc?si=DkJ5N26QGTYolzVe

ಎಸ್‌ಐಟಿಯಿಂದ ನನಗೆ ಬೇರೆ ಟಾರ್ಚರ್ ಇಲ್ಲ, ಆದರೆ ದಿನ ಮೀಡಿಯಾ ಟ್ರಯಲ್ ನಡೆಯುತ್ತಿದೆ. ನನ್ನನ್ನ ಕ್ರಿಮಿನಲ್ ರೀತಿ ಬಿಂಬಿಸುತ್ತಿದ್ದಾರೆ. ಫಲಿತಾಂಶ ನೋಡಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ವೆಗಾ ಸಿಟಿ ಮಾಲ್​ನಿಂದ ಜಿಗಿದು ಯುವಕ ಆತ್ಮಹತ್ಯೆ

Share with Friends
author avatar
News Desk