Blogಕ್ರೀಡೆ-Sports

ಇಂದು ರಾಷ್ಟ್ರೀಯ ಕ್ರೀಡಾ ದಿನ, ಗಣ್ಯರಿಂದ ಮೇಜರ್ ಧ್ಯಾನ್ ಚಂದ್ ಗೆ ಗೌರವಾರ್ಪಣೆ

ನವದೆಹಲಿ: ಇಂದು ರಾಷ್ಟ್ರೀಯ ಕ್ರೀಡಾ ದಿನ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಹಾಕಿ ಲೆಜೆಂಡ್ ಮೇಜರ್ ಧ್ಯಾನ್ ಚಂದ್ ಅವರನ್ನು ಸ್ಮರಿಸಿದ್ದಾರೆ.

ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಮೋದಿ, “ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು. ಇಂದು ನಾವು ಮೇಜರ್ ಧ್ಯಾನ್ ಚಂದ್ ಜಿ ಅವರಿಗೆ ಗೌರವ ಸಲ್ಲಿಸುತ್ತೇವೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಭಾರತಕ್ಕಾಗಿ ಆಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವ ಸಂದರ್ಭವಾಗಿದೆ. ನಮ್ಮ ಸರ್ಕಾರ ಕ್ರೀಡೆಯನ್ನು ಬೆಂಬಲಿಸಲು ಬದ್ಧವಾಗಿದೆ ಮತ್ತು ಹೆಚ್ಚಿನ ಯುವಕರು ಆಟವಾಡಲು ಮತ್ತು ಕ್ರೀಡಾ ಲೋಕದಲ್ಲಿ ಪ್ರಜ್ವಲಿಸಲು ಸಮರ್ಥರಾಗಿದ್ದಾರೆ” ಎಂದಿದ್ದಾರೆ.

ಹಾಕಿ ಲೆಜೆಂಡ್ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನ ಆ.29 ಅನ್ನು ದೇಶದಲ್ಲಿ ‘ರಾಷ್ಟ್ರೀಯ ಕ್ರೀಡಾ ದಿನ’ವನ್ನಾಗಿ ಆಚರಿಸಲಾಗುತ್ತದೆ.ಧ್ಯಾನ್ ಚಂದ್ ಅವರು 1905ರ ಆ.29ರಂದು ಅಲಹಾಬಾದ್ನ ರಜಪೂತ ಸಮುದಾಯದಲ್ಲಿ ಜನಿಸಿದ್ದರು. ಒಲಿಂಪಿಕ್ಸ್ನಲ್ಲಿ ಹಾಕಿಯಲ್ಲಿ ಭಾರತಕ್ಕೆ ಬಂಗಾರ ತಂದು ಕೊಟ್ಟ ಕೀರ್ತಿ ಇವರದ್ದು.

2012ರಲ್ಲಿ ಭಾರತ ಸರ್ಕಾರ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಕ್ರೀಡಾ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿತು. ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳ ಮಹತ್ವವನ್ನು ಒತ್ತಿಹೇಳಲು ಮತ್ತು ಭಾರತೀಯ ಹಾಕಿಯಲ್ಲಿ ಮೇಜರ್ ಧ್ಯಾನ್ ಚಂದ್ ಅವರ ಪರಂಪರೆಯನ್ನು ಗೌರವಿಸುವುದು ಇದರ ಉದ್ದೇಶ.

Share with Friends
author avatar
News Desk