ಸಿಂಗಾಪುರದಲ್ಲಿ ಪಿಎಂ ಮೋದಿ
ಸಿಂಗಾಪುರ : ಚಾಂಗಿ ವಿಮಾನ ನಿಲ್ದಾಣದಲ್ಲಿ ಮೋದಿ ಅವರಿಗೆ ಅಧಿಕೃತ ಸ್ವಾಗತ ದೊರೆಯಿತು. ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ಡಯಾಸ್ಪೊರಾ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು. ಮೋದಿಯವರನ್ನು ಸ್ವಾಗತಿಸಲು ಡೋಲು ವಾದ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಡೋಲಿನ ಶಬ್ದ ಕೇಳಿ ಖುಷಿಯಾದ ಪ್ರಧಾನಿ ನರೇಂದ್ರ ಮೋದಿ ತಾವು ಕೂಡ ಆ ಡೋಲನ್ನು ಬಾರಿಸುವ ಮೂಲಕ ಸಂಭ್ರಮಿಸಿದ್ದಾರೆ. ಈ ವೀಡಿಯೋ ಶೀಘ್ರವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 6 ವರ್ಷಗಳ ನಂತರ ಮೊದಲ ಬಾರಿಗೆ ಸಿಂಗಾಪುರಕ್ಕೆ ಆಗಮಿಸಿದರು. ಬ್ರೂನೆಯಲ್ಲಿ ತಮ್ಮ ಎರಡು ದಿನಗಳ ಪ್ರವಾಸವನ್ನು ಮುಗಿಸಿದ ನಂತರ ಇಂದು ಅವರು ಸಿಂಗಾಪುರಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಲಾರೆನ್ಸ್ ವಾಂಗ್ ಅವರ ಆಹ್ವಾನದ ಮೇರೆಗೆ ಸಿಂಗಾಪುರಕ್ಕೆ ಬಂದಿದ್ದಾರೆ.
ವಾಂಗ್ ಅವರನ್ನು ಭೇಟಿ ಮಾಡುವುದರ ಹೊರತಾಗಿ, ನರೇಂದ್ರ ಮೋದಿ ಅವರು ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ, ಹಿರಿಯ ಸಚಿವರಾದ ಲೀ ಸೀನ್ ಲೂಂಗ್ ಮತ್ತು ಹಿರಿಯ ಸಚಿವ ಗೋ ಚೋಕ್ ಟಾಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ವಾಂಗ್ ಮತ್ತು ಲೀ ಮೋದಿಯವರಿಗೆ ಪ್ರತ್ಯೇಕ ಊಟದ ಮೂಲಕ ಆತಿಥ್ಯ ನೀಡಲಿದ್ದಾರೆ.
2015ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಿಂಗಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ-ಸಿಂಗಾಪುರ ಸಂಬಂಧಗಳನ್ನು ಮತ್ತಷ್ಟು ಗಟ್ಟಿಯಾಗಿದ್ದವು. ಸಿಂಗಾಪುರವು ಅತಿ ಹೆಚ್ಚು ಭಾರತೀಯ ವಲಸಿಗರನ್ನು (3.5 ಲಕ್ಷ) ಹೊಂದಿದೆ.
