Latestರಾಷ್ಟ್ರೀಯ-National

2 ನೇ ಬಾರಿಗೆ ಲೋಕಸಭೆಯ ಸ್ಪೀಕರ್‌ ಆಗಿ ಓಂ ಬಿರ್ಲಾ ಆಯ್ಕೆ

ನವದೆಹಲಿ: 18ನೇ ಲೋಕಸಭೆಯ ಸ್ಪೀಕರ್‌ ಆಗಿ 2 ನೇ ಬಾರಿಗೆ ಓಂ ಬಿರ್ಲಾ (Om Birla) ಆಯ್ಕೆಯಾಗಿದ್ದಾರೆ. ಧ್ವನಿ ಮತದ ಮೂಲಕ ಲೋಕಸಭೆ ಸ್ಪೀಕರ್ (lokasabha Speaker) ಆಗಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಹೆಸರನ್ನು ಪ್ರಸ್ತಾಪಿಸಿದರು. ಸ್ಪೀಕರ್ ಹುದ್ದೆಗೆ ಕೇಂದ್ರಕ್ಕೆ ಬೆಂಬಲ ನೀಡುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದರು. ಇದನ್ನೂ ಓದಿ: ಲಾಸ್ ವೇಗಾಸ್‌ನಲ್ಲಿ ಅಪಾರ್ಟ್‌ ಮೆಂಟ್‌ಗಳ ಮೇಲೆ ಗುಂಡಿನ ದಾಳಿ- ಐದು ಮಂದಿ ಸಾವು

https://youtu.be/97Xqp_kxIBQ?si=vzOkQgJLIHkCe_ta

ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ನೀಡುವಂತೆ ಷರತ್ತು ಹಾಕಿದ್ದರು. ಈ ಬಗ್ಗೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡಿರಲಿಲ್ಲ. ಎನ್‌ಡಿಎಯಿಂದ ಓಂ ಬಿರ್ಲಾ ಮತ್ತು ವಿರೋಧ ಪಕ್ಷದಿಂದ ಕೆ. ಸುರೇಶ್ ಅಭ್ಯರ್ಥಿಯಾಗಿದ್ದರು.

https://youtu.be/OvXrOZlPR8I?si=5xkWi4FbLbgLAWXU

ಸ್ವಾತಂತ್ರ್ಯದ ನಂತರ, ಲೋಕಸಭೆಯ ಸ್ಪೀಕರ್ (Lok Sabha Speaker Election) ಮತ್ತು ಉಪಸಭಾಪತಿಯನ್ನು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಒಮ್ಮತದ ಮೂಲಕ ಆಯ್ಕೆ ಮಾಡಲಾಗುತಿತ್ತು. ಆದರೆ ಈ ಬಾರಿ ಇಂಡಿಯಾ ಬಣ ಅಭ್ಯರ್ಥಿ ಘೋಷಣೆಯ ನಂತರ ಚುನಾವಣೆ ನಡೆದಿದೆ. ಈ ಹಿಂದೆ 1952 ಮತ್ತು 1976ರಲ್ಲಿ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದಿತ್ತು. ಇದನ್ನೂ ಓದಿ: ನಂದಿನಿ ಹಾಲಿನ ದರ ಹೆಚ್ಚಳ- ರಾಯಚೂರಿನಲ್ಲಿ ಹಳೆಯ ಪ್ಯಾಕೆಟ್‌ಗೂ ಹೊಸ ಬೆಲೆ, ಗ್ರಾಹಕರ ಆಕ್ರೋಶ

Share with Friends
author avatar
News Desk