BlogLatestರಾಜಕೀಯ | Politicsರಾಜ್ಯ-Karnatakaರಾಷ್ಟ್ರೀಯ-National

ನಿಖಿಲ್ ಈಗ ಅಭಿಮನ್ಯು ಆಗಿ ಅಲ್ಲ, ಅರ್ಜುನನಾಗಿ ಕಾಂಗ್ರೆಸ್ ಪಕ್ಷಕ್ಕೆ ಸಡ್ಡು ಹೊಡೆಯುತ್ತಾರೆ : ಹೆಚ್ಡಿಕೆ

ಹಾಸನ: ಈ ಬಾರಿ ನಿಖಿಲ್ ಕುಮಾರಸ್ವಾಮಿ ಅಭಿಮಾನ್ಯವಾಗಿ ಕೌರವರ ಪದ್ಮವ್ಯೂಹಕ್ಕೆ ಬಳಿ ಆಗುವುದಿಲ್ಲ. ಬದಲಿಗೆ ಅರ್ಜುನಾನಾಗಿ ಕಾಂಗ್ರೆಸ್ ಪಕ್ಷಕ್ಕೆ ಸಡ್ಡು ಹೊಡೆಯುತ್ತಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಹಾಸನದಲ್ಲಿ ಹಾಸನಾಂಬೆ ದರ್ಶನ ಪಡೆದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಈ ಚುನಾವಣೆಯಲ್ಲಿಯೂ ತಂತ್ರ ಕುತಂತ್ರ ಎಲ್ಲವೂ ನಡೆಯುತ್ತಿದೆ. ಅದೆಲ್ಲವನ್ನೂ ಮೆಟ್ಟಿ ನಿಲ್ಲುತ್ತೇವೆ. ಜನರ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷವನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಹೇಳಿದರು.

ಮಹಾಜನತೆ ಮತ್ತು ಕಾರ್ಯಕರ್ತರು ನಿಖಿಲ್ ಗೆ ದೊಡ್ಡ ಮಟ್ಟದ ಗೆಲುವು ನೀಡುತ್ತಾರೆ ರೇಣುವ ವಿಶ್ವಾಸ ಇದೆ. ಜನರ ಜತೆ ನಿಂತು ಅವರಿಗೆ ಭರವಸೆ ಮೂಡಿಸುವ, ಅವರ ಸೇವೆ ಮಾಡುವ ಯುವಕನಿಗೆ ಚನ್ನಪಟ್ಟಣದಲ್ಲಿ ಅವಕಾಶ ಸಿಗಲಿದೆ ಎನ್ನುವ ನಂಬಿಕೆ ನನಗಿದೆ ಎಂದು ಅವರು ಹೇಳಿದರು.

ವಿರೋಧಿಗಳು ಏನೇ ಕುತಂತ್ರ ಮಾಡಲಿ, ಸಹೋದದರು ಬಿಜೆಪಿಯಿಂದ ಹೈಜಾಕ್ ಮಾಡಿದ ಅಭ್ಯರ್ಥಿಯನ್ನೇ ನಿಲ್ಲಿಸಿದ್ದಾರೆ. ಕಾಂಗ್ರೆಸ್ ನ ಈಗಿನ ಅಭ್ಯರ್ಥಿ ಹಾಗೂ ಸಹೋದರರು ಪರಸ್ಪರ ಈ ಹಿಂದಿನ ಟೀಕೆಗಳನ್ನು ಜನರ ಮುಂದೆ ಇಡಲಿ. ಮೊದಲು ಅವರು ಈ ಕೆಲಸ ಮಾಡಲಿ. ಆಗ ಜನರೇ ತೀರ್ಮಾನ ಮಾಡಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

ಚನ್ನಪಟ್ಟಣ ಚುನಾವಣೆ ದೇಶದ ಗಮನ ಸೆಳೆದಿದೆ. ವಿರೋಧಿಗಳ ಹೇಳಿಕೆ ಗಮನಿಸಿದ್ದೇನೆ. ಅವರ ಹೇಳಿಕೆಗೆ ಜನರೇ ಉತ್ತರ ಕೊಡುತ್ತಾರೆ. ಅರ್ಜುನನಾಗಿ ನಿಖಿಲ್ ಈ ಬಾರಿ ಗೆಲುವು ಸಾಧಿಸುತ್ತಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಎಲ್ಲರನ್ನೂ ಗೆಲ್ಲಿಸಿದವರಿಗೆ ಬಿ ಫಾರಂ ಯಾಕೆ ಸಿಗಲಿಲ್ಲ?
ಅಖಾಡ ಸಿದ್ದ ಆಗಿದೆ ಅಭ್ಯರ್ಥಿ ಘೋಷಣೆ ಆಗಿದೆ ಅದರ ಬಗ್ಗೆ ಈಗ ಮಾತಾಡುವುದು ಬೇಡ..ಮೈತ್ರಿ ಮಾಡಿಸಿದ್ದು ನಾನೇ, ಕುಮಾರಸ್ವಾಮಿಯನ್ನು ಗೆಲ್ಲಿಸಿದ್ದು ನಾನೇ. ಡಾ.ಮಂಜುನಾಥ ಅವರನ್ನು ಗೆಲ್ಲಿಸಿದ್ದು ನಾನೇ ಎನ್ನುತ್ತಾರೆ. ಇಷ್ಟೆಲ್ಲಾ ಪಕ್ಷ ಸೇವೆ ಮಾಡಿದ್ದರೆ ಅವರ ಹೈಕಮಾಂಡ್ ಜತೆ ಮಾತನಾಡಿ ಬಿ ಫಾರಂ ಪಡೆದು ಯಾಕೆ ಚುನಾವಣೆಗೆ ನಿಲ್ಲಲಿಲ್ಲ ಎಂದು ಪ್ರಶ್ನಿಸಿದರು ಸಚಿವರು.

ಅನಿವಾರ್ಯವಾಗಿ ಅವರಿಗೆ ಅಭ್ಯರ್ಥಿ ಪಟ್ಟ ಕಟ್ಟಿದ್ದಾರೆ ಅಷ್ಟೇ. ಅವರು ಚುನಾವಣೆ ಮುಗಿದೇ ಹೋಗಿದೆ ಅಂದುಕೊಂಡಿದ್ದಾರೆ. ಆದರೆ ಚನ್ನಪಟ್ಟಣದಲ್ಲಿ ಜನರು ತೀರ್ಮಾನ ಮಾಡ್ತಾರೆ. ಚನ್ನಪಟ್ಟಣ ಮೊದಲಿಂದಲೂ ಜೆಡಿಎಸ್ ಕೋಟೆ ಅದು. ನಮ್ಮಲ್ಲಿನ ಕೆಲ ತಪ್ಪಿನಿಂದ ಹಿನ್ನಡೆ ಆಗಿತ್ತು. ಅದನ್ನ ಸರಿ ಮಾಡಲು ನನ್ನನ್ನ ರಾಮನಗರ ದಿಂದ ಚನ್ನಪಟ್ಟಣಕ್ಕೆ ಕರೆದೊಯ್ದರು. ಈಗ ಎಲ್ಲವು ಕೂಡ ಸರಿಯಾಗಿದೆ.

ಕುಮಾರಸ್ವಾಮಿ ಮಗನನ್ನು ಮುಗಿಸಲು ಕಾಂಗ್ರೆಸ್ ನಾಯಕರು ಏನು ಕುತಂತ್ರ ಮಾಡಿದರು ಎನ್ನುವುದು ಗೊತ್ತಿದೆ. ಈಗ ಅದು ಸಾಧ್ಯವಿಲ್ಲ ಎಂದು ಜನ ತೋರಿಸುತ್ತಾರೆ. ಚನ್ನಪಟ್ಟಣದಿಂದ ಅವರ ಅವನತಿ ಆರಂಭವಾಗುತ್ತದೆ. ಹಾಸನಾಂಬೆ ದರ್ಶನ ಮಾಡಿ ಹೇಳುತ್ತಿದ್ದೇನೆ, ಬರೆದಿಟ್ಟುಕೊಳ್ಳಿ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ನಮ್ಮಲ್ಲಿ ಯಾವುದೇ ಸಮನ್ವಯದ ಕೊರತೆ ಇಲ್ಲ. ಸಮನ್ವಯದ ಕೊರತೆ ಇರೋದು ಕಾಂಗ್ರೆಸ್‌ನಲ್ಲಿ. ಉಪ ಚುನಾವಣೆ ರಾಜ್ಯ ರಾಜಕಾರಣದ ದಿಕ್ಸೂಚಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.

ಸರ್ಕಾರಕ್ಕೆ ಜನರ ಬಗ್ಗೆ ಅಲಕ್ಷ್ಯ
ಹಲವು ಪ್ರದೇಶದಲ್ಲಿ ಮಳೆಯ‌ ಅನಾಹುತ ಇದೆ, ಬೆಂಗಳೂರು ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಎಲ್ಲಾರೂ ನೋಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರ ಬದುಕು ದಯನೀಯವಾಗಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮುಂಗಾರು ಮಳೆ ಉತ್ತಮವಾಗಿ ಸುರಿದು ಎಲ್ಲಾ ಜಲಾಶಯಗಳು ಭರ್ತಿ ಆಗುವೆ. ಕಾವೇರಿ ಕೊಳ್ಳದ ಅಣೆಕಟ್ಟೆಗಳು ಭರ್ತಿ ಆಗಿದ್ದರು ಕೂಡ ರೈತರಿಗೆ ನೀರು ಸಿಗುತ್ತಿಲ್ಲ. ತಮಿಳುನಾಡಿಗೆ ಯಥೇಚ್ಚವಾಗಿ ನೀರು ಬೀಡಲಾಗಿದೆ. ಇಂಥ ಸಂದರ್ಭದಲ್ಲಿಯೂ ರೈತರು ನೀರಿಗಾಗಿ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ರೈತರ ಆತ್ಮಹತ್ಯೆ ಪ್ರಕರಣಗಳು ವರದಿ ಆಗುತ್ತಿವೆ, ಆನ್ ಲೈನ್ ಗೇಮ್ ಲಾಟರಿ ದಂಧೆ ಯುವಕರ ಜೀವನ ಹಾಳು ಮಾಡುತ್ತಿದೆ. ಸರ್ಕಾರಕ್ಕೆ ಹೇಳೋರು ಕೇಳೂರು ಇಲ್ಲದಂತಹ ಸ್ಥಿತಿ ಉಂಟಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಹಾಗೂ ಇಡೀ ರಾಜ್ಯದಲ್ಲಿ ಮಾದಕ ವಸ್ತು ದಂಧೆ ಮೆರೆ ಮೀರಿದ. ಎಲ್ಲೆಡೆ ಆಡಳಿತ ಕಾನೂನು ವೈಫಲ್ಯ ಎದ್ದು ಕಾಣುತ್ತಿದೆ. ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ಜನರ ಬದುಕಿನ ಜತೆ ಚೆಲ್ಲಾಟ ಆಡುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಜಿಎಸ್ ಟಿ ವ್ಯವಸ್ಥೆಗೆ ಕಾಂಗ್ರೆಸ್ ಕಾರಣ:
ತೆರಿಗೆ ಪದ್ಧತಿ ಬಗ್ಗೆ ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ಪಕ್ಷವೇ. ಜಿಎಸ್‌ಟಿ ಗೂ ಇವರೇ ಕಾರಣ. ಇದು ಕಾಂಗ್ರೆಸ್ ಸರ್ಕಾರವೇ ಮಾಡಿದ್ದು. ಅದನ್ನು ಮಾಡುವಾಗ ಭವಿಷ್ಯದ ಏನಾಗುತ್ತದೆ ಎನ್ನುವುದು ಇವರ ಅರಿವಿಗೆ ಬರಲಿಲ್ಲವೇ? ಆಗ ಡಾ.ಮನಮೋಹನ್ ಸಿಂಗ್, ಪಿ.ಚಿದಂಬರಂ ಅವರೆಲ್ಲಾ ಕೂತೆ ಇದನ್ನೆಲ್ಲಾ ಮಾಡಿದ್ದಲ್ಲವೇ? ಎಂದು ಕೇಂದ್ರ ಸಚಿವರು ಕೇಳಿದರು.

ರಾಜ್ಯ ಸರ್ಕಾರ ಅನಗತ್ಯವಾಗಿ ಕೇಂದ್ರ ಸರ್ಕಾರದ ಜತೆ ಸಂಘರ್ಷ ಮಾಡಿಕೊಳ್ಳುತ್ತಿದೆ. ಇದರಿಂದ ಯಾವ ಉಪಯೋಗವೂ ಇಲ್ಲ. ಕೊಟ್ಟ ಅನುದಾನವನ್ನು ಬಳಸಿಕೊಳ್ಳದೆ ಏನೇನೊ ಹೇಳಿದರೆ ಆಗುವುದಿಲ್ಲ. ಬರೀ ಮಾತಾಡಿಕೊಂಡು ಕೂತರೆ ಸಮಸ್ಯೆ ಬಗೆಹರಿಯುವುದಿಲ್ಲ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನು ಅಲ್ಲ ಎನ್ನುವ ಮಾತು ಇದೆ. ಈ ಸರ್ಕಾರಕ್ಕೆ ಈ ಮಾತು ಅನ್ವಯ ಆಗುತ್ತದೆ ಎಂದು ಅವರು ಲೇವಡಿ ಮಾಡಿದರು.

ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ರಾಜಕೀಯ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರ ಟೀಕೆಗೆ ತಿರುಗೇಟು ಕೊಟ್ಟ ಸಚಿವರು; ನಾನು ಮಾಡುವ ಕೆಲಸಕ್ಕೆ ಲೆಕ್ಕ ಕೇಳುವವರು ಪ್ರಧಾನಿ ಅವರು. ಕಾಂಗ್ರೆಸ್ ನಾಯಕರಿಗೆ ನಾನು ಉತ್ತರ ಕೊಡಬೇಕಿಲ್ಲ ಎಂದು ಗುಡುಗಿದರು.

ಸಚಿವರಿಗೆ ಬಲಗಡೆ ಪ್ರಸಾದ ಕೊಟ್ಟ ಸಿದ್ದೇಶ್ವರ ದೇವರು
ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸುತ್ತಿದ್ದ ವೇಳೆ ಶ್ರೀ ಸಿದ್ದೇಶ್ವರ ಸ್ವಾಮಿ ದೇವರು ಬಲಗಡೆ ಪ್ರಸಾದ ಸಿಕ್ಕಿತು. ಅವರಿಗೆ ಬಲಗಡೆಯಿಂದ ಹೂ ಕೊಟ್ಟ ಸಿದ್ದೇಶ್ವರಸ್ವಾಮಿ ಹಾಸನಾಂಬೆ ದರ್ಶನ ನಂತರ ಸಿದ್ದೇಶ್ವರಸ್ವಾಮಿ ದರ್ಶನ ಮಾಡಿದ ಸಚಿವರು, ತಮ್ಮ ಧರ್ಮಪತ್ನಿ, ಸೊಸೆ, ಮೊಮ್ಮಗನ ಜತೆ ದೇವರ ದರ್ಶನ ಪಡೆದುಕೊಂಡರು.

Share with Friends
author avatar
News Desk