
ಕಂಗನಾ ರಣಾವತ್ ಕಾಲೆಳೆದ ನೆಟ್ಟಿಗರು! ಸರಿಯಾದ ಕಾಗುಣಿತವೂ ಗೊತ್ತಿಲ್ಲವೇ?
ನವದೆಹಲಿ: ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂದೇಶದಲ್ಲಿನ ವ್ಯಾಕರಣ ದೋಷ ನೆಟ್ಟಿಗರಿಗೆ ಅಸ್ತ್ರವಾಗಿದೆ, ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುವ ಮೂಲಕ ನಟಿಯ ಕಾಲೆಳೆಯುತ್ತಿದ್ದಾರೆ.troll pepole
ಇತ್ತೀಚಿಗಷ್ಟೇ ನೀಟ್ ಪರೀಕ್ಷೆಯ ಅಕ್ರಮ ಕುರಿತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ CJP ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ Gen-z ಗಳನ್ನು Gutter ಎಂದು ಟೀಕಿಸಿ ತೀವ್ರ ವಿವಾದಕ್ಕೀಡಾಗಿದ್ದ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸತ್ ಸದಸ್ಯೆ ಕಂಗನಾ ರಣಾವತ್, 80ನೇ ಸ್ವಾತಂತ್ರ್ಯ ದಿನಾಚರಣೆಗೆ ಮಾಡಿರುವ ಶುಭಾಶಯ ಚರ್ಚೆಗೆ ಗ್ರಾಸವಾಗಿದೆ .
“Happy Independence Day” (ಹ್ಯಾಪಿ ಇಂಡಿಪೆಂಡೆನ್ಸ್ ಡೇ) ಎಂದು ಬರೆಯುವ ಬದಲು “Happy Independent Day” (ಹ್ಯಾಪಿ ಇಂಡಿಪೆಂಡೆಂಟ್ ಡೇ) ಎಂದು ಬರೆಯುವ ಮೂಲಕ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ. ಎಂದು ಕೇಳಿ ಬಂದಿದೆ .
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಭಾರತೀಯ ಧ್ವಜವನ್ನುಹಾರಡಿಸುತ್ತಿರ ವೀಡಿಯೊವೊಂದನ್ನು ಹಂಚಿಕೊಂಡಿರುವ ಕಂಗನಾ, ಅದರ ಜೊತೆಗೆ “Happy Independent Day” ಎಂಬ ಸಂದೇಶವನ್ನು ಬರೆದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟ್ ಅನ್ನು ಹಂಚಿಕೊಳ್ಳುವಾಗಲೂ ಕಂಗನಾ ಮತ್ತೊಮ್ಮೆ “Happy Independent Day” ಎಂದೇ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರರು, “ಮೇಡಂ, ನಿಮಗೆ ‘Independence’ (ಸ್ವಾತಂತ್ರ್ಯ) ಪದದ ಸರಿಯಾದ ಕಾಗುಣಿತವಾದರೂ ಗೊತ್ತಿದೆಯೇ?” ಎಂದು ಪ್ರಶ್ನೆ ಮಾಡಿದ್ದಾರೆ ..
