Latestರಾಷ್ಟ್ರೀಯ-National

ಟ್ಯಾಬ್ಲೆಟ್ ಮೂಲಕ ರಾಮನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದನ್ನು ವೀಕ್ಷಿಸಿದ ಮೋದಿ

ಇಂದು ರಾಮಮಂದಿರ (RamMandir) ನಿರ್ಮಾಣವಾದ ಬಳಿಕ ಮೊದಲ ರಾಮನವಮಿಯನ್ನು (Ramanavami) ಅಯೋಧ್ಯೆಯಲ್ಲಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಮಲಲ್ಲಾನ ಹಣೆಯ ಮೇಲೆ ಸೂರ್ಯರಶ್ಮಿ ಸ್ಪರ್ಶವಾಗಿದೆ. ಈ ಕ್ಷಣವನ್ನು ಕೋಟ್ಯಾಂತರ ಭಕ್ತರು ಕಣ್ತುಂಬಿಕೊಂಡರು. ಈ ಕ್ಷಣವನ್ನು ನರೇಂದ್ರ ಮೋಧಿಯವರು ಕೂಡ ವೀಕ್ಷಿಸಿದರು. ಅದರಲ್ಲು ಅವರು ವಿಮಾನದಲ್ಲಿ ಚಪ್ಪಲಿ ಬಿಚ್ಚಿ ವೀಕ್ಷಿಸಿದ್ದಾರೆ.

ಅಸ್ಸಾಂನ ನಲ್ಬರಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋಧಿ ಅವರು, ರಾಮನವಮಿ ಹಬ್ಬದ ಸಮಾರಂಭವು ನನ್ನನ್ನು ತುಂಬಾ ಭಾವುಕರನ್ನಾಗಿಸಿದೆ ಎಂದು ಹೇಳಿದರು. ಇದನ್ನೂ ಓದಿ: ರಾಮಮಂದಿರದಲ್ಲಿ ರಾಮನವಮಿ – ಅದ್ದೂರಿಯಾಗಿ ಆಚರಿಸಲು ಅಯೋಧ್ಯೆ ಸಜ್ಜು

ನಲ್ಬರಿ ರ್ಯಾಲಿಯ ನಂತರ ನಾನು ರಾಮಲಲ್ಲಾ ಹಣೆಯ ಮೇಲೆ ಮೂಡುದ ಸೂರ್ಯರಶ್ಮಿಯನ್ನು ವೀಕ್ಷಣೆ ಮಾಡಿದೆ. ಕೋಟ್ಯಂತರ ರಾಮ ಭಕ್ತರಂತೆ ನಾನು ಕೂಡ ಈ ಕ್ಷಂಕ್ಕೆ ಸಾಕ್ಷಿಯಾದೆ ಎಂದು ಅವರು ತಮ್ಮ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಈ ಸೂರ್ಯರಶ್ಮಿ ನಮ್ಮ ಜೀವನದಲ್ಲಿ ಶಕ್ತಿಯನ್ನು ತರಲಿ ಹಾಗೂ ವೈಭವದ ಹೊಸ ಎತ್ತರಗಳನ್ನು ಏರಲು ನಮ್ಮ ರಾಷ್ಟçವನ್ನು ಪ್ರೇರೇಪಿಸಲಿ ಎಂದು ಹೇಳಿದರು. ಇದನ್ನೂ ಓದಿ:  ರಾಮಮಂದಿರದಲ್ಲಿ ಬಾಲರಾಮನ ಹಣೆಯ ಸ್ಪರ್ಶಿಸಿದ ಸೂರ್ಯರಶ್ಮಿ

Share with Friends
author avatar
News Desk