BlogLatestTop Storiesಬೆಂಗಳೂರು-Bengaluru

ಊರ್ವಸಿ ಥಿಯೇಟರ್‌ನ ವಾಶ್‌ ರೂಂನಲ್ಲಿ ಯುವತಿ ಖಾಸಗಿ ವಿಡಿಯೊ ರೆಕಾರ್ಡ್‌ ಮಾಡಿದ ಅಪ್ರಾಪ್ತನ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಕಾಮುಕ ಕಾಟಕ್ಕೆ ಬ್ರೇಕ್ ಇಲ್ಲವೇನೋ ಅನ್ನುವಂತಾಗಿದೆ. ಇತ್ತೀಚೆಗೆ ನಗರದ ಕಾಫಿ ಶಾಪ್ ನ ಲೇಡಿಸ್ ವಾಶ್ ರೂಮ್ ನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ., ಊರ್ವಸಿ ಥಿಯೇಟರ್ ನಲ್ಲೂ ಯುವತಿಯ ವಿಡಿಯೋ ಚಿತ್ರೀಕರಣ ಮಾಡಿದ ಘಟನೆ ನಡೆದಿದೆ.

ಊರ್ವಶಿ ಥಿಯೇಟರ್‌ನಲ್ಲಿ ‘ಭೀಮ’ ಸಿನಿಮಾ ವೀಕ್ಷಿಸುತ್ತಿದ್ದ ಯುವತಿ ವಾಶ್‌ರೂಂಗೆ ತೆರಳಿದ್ದ ವೇಳೆ ಅಪ್ರಾಪ್ತ ಕಿಟಕಿ ಮುಖಾಂತರ ಆಕೆಯ ಖಾಸಗಿ ವಿಡಿಯೊ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಗಸ್ಟ್‌ 10ರಂದು ರಾತ್ರಿ ಈ ಘಟನೆ ನಡೆದಿದೆ. ಸಂತ್ರಸ್ತೆ ನೀಡಿದ ದೂರು ಆಧರಿಸಿ ಕೃತ್ಯ ಎಸಗಿದ್ದ ಇಬ್ಬರು ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ.

ಊರ್ವಶಿ ಶಿಯೇಟರ್ ನಲ್ಲಿ ಭೀಮಾ ಸಿನಿಮಾ ವೀಕ್ಷಣೆಗೆ ಬಂದಿದ್ದ ಯುವತಿಯೊಬ್ರು ಬಂದಿದ್ರು. ಲೇಡಿಸ್ ವಾಶ್ ರೂಮ್ ಗೆ ಹೋಗಿದ್ದಾಗ ಅಪ್ರಾಪ್ತನೊಬ್ಬ ವಿಡಿಯೋ ಮಾಡ್ತಿದ್ದ. ಈ ವೇಳೆ ಭಯಗೊಂಡು ಯುವತಿ ಕಿರುಚಾಡಿದ್ದಾಳೆ. ಕಿಟಕಿಯಿಂದ ಮೊಬೈಲ್ ಇಟ್ಟು ವಿಡಿಯೋ ಚಿತ್ರಿಕರಿಸುತ್ತಿದ್ದ ಅಪ್ರಾಪ್ತನ್ನು ಸ್ಥಳೀಯರು ಅಪ್ರಾಪ್ತನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ರು. ಯುವತಿ ಕೊಟ್ಟ ದೂರಿನನ್ವಯ ಅಪ್ರಾಪ್ತ ಆರೋಪಿಯನ್ನ ವಶಕ್ಕೆ ಪಡೆದು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Share with Friends
author avatar
News Desk